ಯರ್‌ಗೋಳ್ ಡ್ಯಾಂ ಉದ್ಘಾಟನೆ ಕೋಲಾರದಲ್ಲಿ ನೆರವೇರಿಸಲಿ

ಕೋಲಾರ,ಅ,೩೧- ಯರ್‌ಗೋಳ್ ಡ್ಯಾಂ ಉದ್ಘಾಟನೆ ಕಾರ್ಯಕ್ರಮವನ್ನು ಕೋಲಾರದಲ್ಲಿ ಮಾಡ ಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಷ್ ಪಾಷ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಯರ್‌ಗೋಳ್ ಯೋಜನೆಗೆ ಕಳೆದ ೨೭ ವರ್ಷಗಳ ನಂತರ ಮೋಕ್ಷ ದೊರಕಿದೆ. ಯರ್‌ಗೋಳ್ ಯೋಜನೆಯು ಕೋಲಾರ ಜನತೆಯ ಕನಸಿನ ಕೊಸು ಅಗಿದೆ. ಯರ್‌ಗೋಳ್ ಯೋಜನೆಯು ರೂಪರೇಷೆಗಳು ಪ್ರಾರಂಭವಾಗಿದ್ದು ಕೋಲಾರದಿಂದಲೇ ಅಗಿದೆ. ಕೋಲಾರದ ಜನತೆಗೆ ಕುಡಿಯುವ ನೀರು ತರುವ ಯೋಜನೆ ಮಾದ್ಯಮಗಳ ಆಶಯವಾಗಿದ್ದು ಅವರ ಶ್ರಮ ಅಪಾರವಾಗಿದ್ದು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಇದಕ್ಕೆ ಪೂರಕವಾಗಿ ಅಂದು ಸಚಿವರಾಗಿದ್ದ ಕೆ.ಶ್ರೀನಿವಾಸಗೌಡರು ಹೆಚ್ಚಿನ ಆಸಕ್ತಿ ವಹಿಸಿ ಅಗಿನ ಮುಖ್ಯ ಮಂತ್ರಿ ಧರ್ಮಸಿಂಗ್ ಯರ್‌ಗೋಳ್ ಯೋಜನೆಗೆ ಮಂಜೂರಾತಿ ನೀಡಿದರು ಎಂದು ನೆನಪಿಸಿದರು.
ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜನಿಯರ್ ಪಾಪೇಗೌಡರು, ಗುತ್ತಿಗೆದಾರ ರವಿ ಹಾಗೂ ಕೋಲಾರ ನಗರಸಭೆ ಸದಸ್ಯ ದಿವಂಗತ ತ್ಯಾಗರಾಜ್ ಅವರುಗಳು ಮಾಲೂರು ಮಾರ್ಕೆಂಡಯ್ಯ ಕೆರೆ ಕೋಡಿ ಹರಿದು ಬಂಗಾರಪೇಟೆ ಗಡಿಭಾಗದ ಯರ್‌ಗೋಳ್ ಗ್ರಾಮದ ಮೂಲಕ ತಮಿಳು ನಾಡಿಗೆ ಯೆಥೇಚ್ಚವಾಗಿ ಹಲವಾರು ಕ್ಯೊಸೆಕ್ ನೀರು ವ್ಯರ್ಥವಾಗಿ ತಮಿಳು ನಾಡಿಗೆ ಹರಿದು ಹೋಗುತ್ತಿರುವುದು ಕಂಡರು,
ಕೋಲಾರ ಜಿಲ್ಲೆಯಲ್ಲಿ ಬರ ವ್ಯಾಪಿಸಿದ್ದು, ಅಂತರ್ಜಲ ಮಟ್ಟ ಸಾವಿರಾರು ಅಡಿ ಪಾತಳ ಸೇರಿದ್ದು, ಜನತೆಗೆ ಕುಡಿಯಲು ಕೊಳವೆ ಬಾವಿಯ ಪ್ಲೋರೈಡ್ ನೀರೇ ಗತಿಯಾಗಿರುವುದನ್ನು ಚಿಂತಿಸಿದ ಈ ಮೂರು ಮಂದಿಯು ಈ ಕುರಿತು ಚರ್ಚಿಸಿ, ಯರ್‌ಗೋಳ್ ಗ್ರಾಮದ ಹಳ್ಳದ ಮೂಲಕ ತಮಿಳು ನಾಡಿಗೆ ಹರಿಯುತ್ತಿರುವ ನೀರನ್ನು ಶೇಖರಿಸಲು ಡ್ಯಾಂ ನಿರ್ಮಿಸಿ ಕೊಂಡಲ್ಲಿ ಹಲವು ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ, ಇದರಿಂದ ಜನತೆಯನ್ನು ಪ್ಲೋರೈಡ್‌ನಿಂದ ಮುಕ್ತಗೊಳಿಸ ಬಹುದಾಗಿದೆ ಎಂದು ಯರ್‌ಗೋಳ್ ಡ್ಯಾಂ ನಿರ್ಮಾಣದ ಕುರಿತು ಸಾಧಕ ಭಾಧಕಗಳನ್ನು ಅಧ್ಯಾಯನ ಮಾಡಿ ಅಂದಿನ ಮಾದ್ಯಮಗಳ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಈ ಯೋಜನೆಗೆ ನಾನು ನಗರಸಭೆ ಅಧ್ಯಕ್ಷನಾಗಿದ್ದು , ಹಲವು ಕಂತುಗಳಲ್ಲಿ ಸುಮಾರು ೨೦ ಲಕ್ಷ ರೂ ದೇಣಿಗೆ ನೀಡಿದ್ದೇವೆ ಎಂದು ವಿವರಿಸಿದರು,
ಯರ್‌ಗೋಳ್ ಯೋಜನೆಯಲ್ಲಿ ಕೋಲಾರದ ಶ್ರಮ ಅಪಾರವಾಗಿದೆ ಬಂಗಾರಪೇಟೆಯಲ್ಲಿ ಈ ಯೋಜನೆ ಉದ್ಘಾಟನೆ ಮಾಡುತ್ತಿರುವುದರಿಂದ ಕೋಲಾರಕ್ಕೆ ಅನ್ಯಾಯ ಮಾಡಿದಂತಾಗಿದೆ ಈ ಯೋಜನೆಯನ್ನು ಕೋಲಾರದಲ್ಲಿಯೇ ಉದ್ಘಾಟಿಸಿದರೆ ಅರ್ಥಪೂರ್ಣವಾಗುವುದು. ಇದು ಬಂಗಾರಪೇಟೆ ತಾಲ್ಲೂಕಿಗೆ ಸೇರಿರ ಬಹುದು ಅದರೆ ಕೋಲಾರ ಜಿಲ್ಲಾ ಕೇಂದ್ರವಾಗಿದ್ದು ಇಲ್ಲಿನ ಜನಪ್ರತಿನಿಧಿಗಳ ಮತ್ತು ಮುಖಂಡರ, ಮಾದ್ಯಮಗಳ ಶ್ರಮ ಅಪಾರವಾಗಿರುವುದರಿಂದ ಕೋಲಾರದಲ್ಲಿಯೇ ಉದ್ಘಾಟಿಸ ಬೇಕೆಂದು ಪ್ರತಿಪಾದಿಸಿದರು,
ಇದಕ್ಕೆ ಧ್ವನಿಗೊಡಿಸಿದ ಗುತ್ತಿಗೆದಾರ ರವಿ ಅವರು ಮಾತನಾಡಿ ಮಾದ್ಯಮಗಳು ಈ ಯೋಜನೆಯ ಬೆನ್ನು ಹತ್ತಿ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಮೇಲೆ ಭಾರಿ ಒತ್ತಡದ ಲಾಭಿ ನಡೆಸಿದರು. ಇದರ ಯಶಸ್ಸು ಮಾದ್ಯಮಗಳಿಗೆ ಸೇರ ಬೇಕೆಂದರು,
ಆ ಸಂದರ್ಭದಲ್ಲಿ ಮಾಜಿ ಸಚಿವ ಮಾಲೂರಿನ ಕೃಷ್ಣಯ್ಯಶೆಟ್ಟಿ, ಬಂಗಾರಪೇಟೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕೋಲಾರದ ಕೆ.ಶ್ರೀನಿವಾಸಗೌಡರು ಹಾಗೂ ಕೆ.ಜಿ.ಎಫ್. ರಾಜೇಂದ್ರ ಅವರು ಯರ್‌ಗೋಳ್ ಡ್ಯಾಂ ನೀಲಿ ನಕಾಶೆಗೆ ಹಾಗೂ ಅಂದಾಜು ವೆಚ್ಚಗಳ ರೂಪರೇಷೆಗಳಿಗೆ ತಮ್ಮ ಅನುದಾನವನ್ನು ನೀಡಿದರು, ನೀರಾವರಿ ನಿಗಮದ ಅಧ್ಯಕ್ಷರಾಗಿದ್ದ ವರ್ತೂರು ಪ್ರಕಾಶ್ ಅವರು ಪೈಪ್‌ಗಳ ಕಾಮಗಾರಿಗೆ ಚಾಲನೆ ನೀಡಿದ್ದರು ಎಂದು ನೆನಪಿಸಿದರು,
ನಂತರದಲ್ಲಿ ಯರ್‌ಗೋಳ್ ಯೋಜನೆಗೆ ನಾನಾ ರೀತಿಯಲ್ಲಿ ಅಡೆತಡೆಗಳಿಂದ ಹಲವಾರು ವರ್ಷಗಳ ವಿಳಂಬವಾಯಿತು, ಯರ್‌ಗೋಳ್ ಬಗ್ಗೆ ಪ್ರಸ್ತಾಪಿಸಿದರೆ ಬರಿಗೋಳ್ ಎಂಬ ಟೀಕೆಗಳನ್ನು ಎದುರಿಸ ಬೇಕಾಯಿತು ಎಂದರು.
ದೆಹಲಿ ಮಟ್ಟದಲ್ಲಿಯೇ ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ದೊರೆಯುವುದು ದೊಡ್ಡ ಕಂಟಕವಾಗಿ ಕಾಡಿತ್ತು, ಈ ಸಂದರ್ಭದಲ್ಲಿ ಸಂಸದ ಕೆ.ಹೆಚ್.ಮುನಿಯಪ್ಪ ಅವರು ಸಹ ಒತ್ತಡ ಹೇರಿದ್ದರು. ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು ಕುಮಾರಸ್ವಾಮಿ ಮತ್ತೊಂದು ಭಾರಿ ಬಿ.ಎಸ್. ಯಡಿಯೂರಪ್ಪ ನವರು ಸೇರಿದಂತೆ ಎರಡು ಭಾರಿ ಉದ್ಘಾಟನೆ ನಡೆದಿತ್ತು ನಂತರದಲ್ಲಿ ಧರ್ಮಸಿಂಗ್ ಅವರ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಟೆಂಡರ್‌ಗಳಾಗಿ ಅನುದಾನ ಬಿಡುಗಡೆ ಅಯಿತು ಎಂದರು.