ಯರ್‌ಗೋಳ್ ಜೂತೆ ಇತರೆ ಅಭಿವೃದ್ದಿಗಳಿಗೆ ಸಿಎಂಗೆ ಮನವಿ

ಕೋಲಾರ,ನ,೭- ಯರ್‌ಗೋಳ್ ಡ್ಯಾಮ್ ಉದ್ಘಾಟನೆಗೆ ಸಂಬಂಧಿಸಿದಂತೆ ಹಲವು ತಿಂಗಳಿಂದ ಚರ್ಚೆ ಅಗಿದ್ದು,ನ ೧೦ ರಂದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉದ್ಘಾಟಿಸಲು ನಿರ್ಧರಿಸಲಾಗಿತ್ತು ಅದರೆ ತೆಲಂಗಾಣಕ್ಕೆ ಸಿದ್ದರಾಮಯ್ಯನವರು ಅಂದು ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಹೈಕಮಾಂಡ್ ಅದೇಶ ಬಂದ ಹಿನ್ನಲೆಯಲ್ಲಿ ೧೧ಕ್ಕೆ ಮುಂದೊಡ ಬೇಕಾಗಿ ಬಂದಿತು ಎಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್ ತಿಳಿಸಿದರು,
ನಗರದ ಕಾಂಗ್ರೇಸ್ ಭವನದಲ್ಲಿ ಯರೊಗೋಳ್ ಡ್ಯಾಮ್ ಉದ್ಘಾಟನೆಗೆ ಮುಖ್ಯ ಮಂತ್ರಿಗಳ ಬಂಗಾರಪೇಟೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ಉದ್ಘಾಟನಾ ಕಾರ್ಯಕ್ರಮದ ಜೂತೆಗೆ ಕೋಲಾರದಲ್ಲಿ ಕೆ.ಡಿ.ಪಿ ಸಭೆಯನ್ನು ನಿಗಧಿ ಪಡೆಸುವ ಕುರಿತು ಮುಖ್ಯ ಮಂತ್ರಿಗಳ ಬಳಿ ಪ್ರಸ್ತಾಪಿಸಿದಾಗ ಸಮಯದ ಅಭಾವ ಉಂಟಾಗಲಿದೆ ಬೇರೊಂದು ದಿನ ನಿಗಧಿಸೋಣಾ ಈಗಾ ಯರ್‌ಗೋಳ್ ಡ್ಯಾಮ್ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಸದ್ಯಕ್ಕೆ ಸಾಕೆಂದು ಹೇಳಿದರು.
ಬಂಗಾರಪೇಟೆಯಿಂದ ೩೫ ಕಿ.ಮಿ. ಅಂತರದಲ್ಲಿರುವ ಡ್ಯಾಮ್‌ಗೆ ಹೆಲಿಕ್ಯಾಪ್ಟರ್ ಮೂಲಕ ನೇರವಾಗಿ ಅಗಮಿಸುವ ನಿರೀಕ್ಷೆ ಇದೆ. ಸರ್ಕಾರ ರಚನೆ ಆದಾ ಮೇಲೆ ಕೋಲಾರಕ್ಕೆ ಎರಡನೇ ಭೇಟಿ ಇದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ಸುಗೊಳಿಸ ಬೇಕು. ಯರ್‌ಗೋಳ್ ನೀರು ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ಮತ್ತು ೪೫ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಅಗಿರುವುದರಿಂದ ಮೂರು ಕ್ಷೇತ್ರದ ಜನಪ್ರತಿನಿಧಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸಲು ಅಗತ್ಯವಾದ ಸಾರಿಗೆ ವ್ಯವಸ್ಥೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿದ್ದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರು ಊಟದ ಜವಾಬ್ದಾರಿಯನ್ನು ವಹಿಸಿ ಕೊಂಡಿದ್ದಾರೆ ಎಂದರು.
ಈ ಕಾರ್ಯಕ್ರಮದ ಜೂತೆಗೆ ಮುಖ್ಯ ಮಂತ್ರಿಗಳು ಈ ಹಿಂದೆ ಕೋಲಾರದಲ್ಲಿ ಸ್ವರ್ಧಿಸಿ ಬೇಕೆಂದು ಕೊಂಡಿದ್ದ ಸಂದರ್ಭದಲ್ಲಿ ನೀಡಿದ್ದ ಹಲವು ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆಯೂ ಗಮನ ಸೆಳೆಯ ಬೇಕಾಗಿದೆ ಎಂದು ಹೇಳಿದರು.
೭ ಗಂಟೆ ವಿದ್ಯುತ್ ಪೂರೈಕೆ ಸರ್ಕಾರ ಕ್ರಮ-
ಇಂದು ಮುಖ್ಯ ಮಂತ್ರಿಗಳ ನಡೆಸಿದ ವಿಶೇಷ ಸಭೆಯಲ್ಲಿ ರೈತರಿಗೆ ನೀಡುತ್ತಿದ್ದ ೫ ಗಂಟೆಯ ೩ ಫೆಸ್ ವಿದ್ಯುತ್‌ನ್ನು ೭ ಗಂಟೆಗೆ ಹೆಚ್ಚಿಸಲು ಮತ್ತು ೨ ಸಾವಿರ ಮೆಗಾವ್ಯಾಟ್ ವಿದ್ಯುತ್‌ನ್ನು ೩ ಸಾವಿರಕ್ಕೆ ಏರಿಕೆ ಮಾಡಲು ಸಂಬಂಧ ಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವ ಮೂಲಕ ರೈತರ ಬೇಡಿಕೆಯನ್ನು ಪೂರೈಸಿರುವುದು ಸ್ವಾಗತಾರ್ಹವಾಗಿದೆ. ಇದೇ ರೀತಿ ಪ್ರತಿ ವಾರವೂ ಒಂದೊಂದು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು,
ರಿಂಗ್ ರೋಡ್ ನೀಲಿ ನಕ್ಷೆ ರಚನೆಗೆ ಸೂಚನೆ-
ಕೋಲಾರದ ಬಹು ದಿನದ ಕನಸಾಗಿದ್ದ ರಿಂಗ್ ರೋಡ್ ಕಾಮಗಾರಿಗೆ ಸಂಬಂಧಿಸಿದಂತೆ ವಿಶೇಷ ಸಮಿತಿ ರಚಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಮಾಸ್ಟರ್ ಪ್ಲಾನ್ ಸಿದ್ದ ಪಡೆಸಲು ಸೂಚಿಸಲಾಗಿದೆ. ಜೂತೆಗೆ ಕೋಲಾರದ ಅಭಿವೃದ್ದಿಗೆ ಅನುದಾನ ಬಿಡುಗಡೆಯ ಮನವಿಗೆ ಮುಖ್ಯ ಮಂತ್ರಿಗಳು ಡಿಸೆಂಬರ್ ಮಾಹೆಯಲ್ಲಿ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು.
ಕೋಲಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾಂಗ್ರೇಸ್ ಶಕ್ತಿ ಪ್ರದರ್ಶನ ನೀಡಿದಾಗ ಅವರಿಗೂ ನಮ್ಮ ಜಿಲ್ಲೆಯ ಅಭಿವೃದ್ದಿಗೆ ಉತ್ತೇಜನ ನೀಡಿದಂತಾಗುವುದು ಈ ಸಂಬಂಧವಾಗಿ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಶಾಸಕ ಡಾ. ಕೊತ್ತೂರು ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಆರ್. ಸುದರ್ಶನ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿದರು.