ಯರಿಂಗಳಿಗಿ ಪ್ರಾ.ಕೃ.ಪ.ಸ.ಸಂಘಕ್ಕೆ ಎರಡನೇ ಬಾರಿ ಅಧ್ಯಕ್ಷರಾಗಿ ರಾಜಾಪುರಂ ನಾರಾಯಣ ರೆಡ್ಡಿ ಅವಿರೋಧ ಆಯ್ಕೆ


ಸಂಜೆವಾಣಿ ವಾರ್ತೆ
ಕುರುಗೋಡು:ಸೆ.14 ಯರಂಗಳಿಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎರಡನೇ ಬಾರಿಗೆ ಯರಂಗಳಿಗಿ ರಾಜಾಪುರಂ ನಾರಾಯಣ ರೆಡ್ಡಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ.
ತಾಲೂಕು ಸಮೀಪದ ಯರಿಂಗಳಿಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು, ಚುನಾವಣಾಧಿಕಾರಿಗಳಾದ ಜೆ.ಎಂ.ನಾಗರಾಜ ಅವರು ಚುನಾವಣೆ ನೇತೃತ್ವ ವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಯರಂಗಳಿಗಿ ರಾಜಾಪುರಂ ನಾರಾಯಣ ರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಯರಂಗಳಿಗಿ ಗ್ರಾಮದ ಕೆರೆ ಕೆರೆ ವೆಂಕಣ್ಣ ಅವರು ವರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಅಧ್ಯಕ್ಷರಾಗಿ ಯರಂಗಳಿಗಿ ರಾಜಾಪುರಂ ನಾರಾಯಣ ರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಯರಂಗಳಿಗಿ ಗ್ರಾಮದ ಕೆರೆ ಕೆರೆ ವೆಂಕಣ್ಣ ಅವರು ಅವಿರೋಧ ಆಯ್ಕೆ ಆಗಿರುತ್ತರೆಂದು ಚುನಾವಣಾಧಿಕಾರಿ ಜೆ.ಎಂ.ನಾಗರಾಜ ಅವರು ಹೇಳಿದರು.
ನಂತರ ಅಧ್ಯಕ್ಷ ರಾಜಾಪುರಂ ನಾರಾಯಣ ರೆಡ್ಡಿ ಮಾತನಾಡಿ, ಸಹಕಾರ ಸಂಘದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ್ದು, ಉಪಾಧ್ಯಕ್ಷರ, ನಿರ್ದೇಶಕರ ಹಾಗೂ ಸಿಬ್ಬಂದಿ ವರ್ಗದವರ ಮತ್ತು ಎರಡು ಗ್ರಾಮಗಳ ರೈತರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿ ಜತೆಗೆ ರೈತರಿಗೆ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವದ್ದಟ್ಟಿ ಗ್ರಾಮದ ವೀರಾಪುರ ದಿವಾಕರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ, ತಿಪ್ಪರೆಡ್ಡಿ, ಅವಿರೋದವಾಗಿ ಆಯ್ಕೆಗಿರುವ ನೂತನ ನಿರ್ದೇಶಕರುಗಳಾದ ವದ್ದಟ್ಟಿ ಗ್ರಾಮದ ಕಾಸಾಲು ಹನುಮಂತರೆಡ್ಡಿ, ಕಾಸಾಲು ರಾಘವೇಂದ್ರ ರೆಡ್ಡಿ, ಗುಡ್ರು ಮಲ್ಲಪ್ಪ, ಯರಿಂಗಳಿಗಿ ಗ್ರಾಮದ ಆರ್. ತಿಮ್ಮರೆಡ್ಡಿ, ಪೂಜಾರಿ ರಾಮಲಿಂಗಪ್ಪ, ಬಾವಿಕಟ್ಟೆ ಕರಿಬಸವರೆಡ್ಡಿ, ಆಡು ಕಾಯೋ ಪಾಂಡುರಂಗಪ್ಪ, ತೆಕ್ಕಲಕೋಟೆ ಪದ್ದಮ್ಮ, ಹುಲುಗಪ್ಪ ಮತ್ತು ಗ್ರಾಮದ ಮುಖಂಡರು ಇದ್ದರು.