ಯರಮರಸ್ ೧೫ ರಿಂದ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ

ಅರಕೇರಾ.ನ.೧೪-ದೇವದುರ್ಗ ತಾಲೂಕಿನ ಯರಮರಸ್ ಗ್ರಾಮದ ಸದ್ಗುರು ಶ್ರೀವೀರಭದ್ರ ತಾತನವರ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮ ನ.೧೫ ರಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ನ. ೧೫ ರಂದು ಶ್ರೀ. ಲಿಂ.ವೀರಭದ್ರಯ್ಯ ತಾತನವರ ಉಭಯ ಶಿಲಾಮೂರ್ತಿ ಕುಂಭ-ಕಳಸ, ಡೊಳ್ಳು-ವಾದ್ಯಗಳೊಂದಿಗೆ ಮೆರವಣಿಗೆ, ನ. ೧೬ ರಂದು ಹೋಮ-ಹವನ ಕಾರ್ಯಕ್ರಮ, ನ. ೧೭ ರಂದು ಶಿಲಾಮೂರ್ತಿಗೆ ರುದ್ರಾಭಿಷೇಕ ಹಾಗೂ ಪ್ರತಿಷ್ಠಾಪನೆ ನೀಲಗಲ್ ಬೃಹನ್ಮಠದ ಶ್ರೀ. ಡಾ.ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯತೆಯಲ್ಲಿ ಜರುಗುವವು. ಬಳಿಕ ಬೆಳಗ್ಗೆ ೧೧ ಗಂಟೆಗೆ ಧರ್ಮಸಭೆ ಜರುಗುವುದು. ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಾಧೀಶರು, ರಾಜಕೀಯ ಗಣ್ಯರು, ಸುತ್ತಲಿನ ಗ್ರಾಮದ ಭಕ್ತರು ಭಾಗವಹಿಸುವರು ಎಂದು ವೀರಭದ್ರೇಶ್ವರ ಗದ್ದುಗೆ ಸಂಸ್ಥಾನ ಮಠದ ಭಕ್ತಮಂಡಳಿ ತಿಳಿಸಿದೆ.