ಯರಗೇರಾ : ನರೇಗಾ ಉತ್ತಮ ಕಾಮಗಾರಿ

ರಾಯಚೂರು.ಸೆ.16- ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2020-21 ಸಾಲಿನಲ್ಲಿ ನಡೆದ ಕಾಮಗಾರಿಯಲ್ಲಿ ಅವರು ಅಂಗನವಾಡಿ ಕಟ್ಟಡವನ್ನು ವೀಕ್ಷಿಸಿ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಶಿಕ್ಷಣ ಉತ್ತಮಗೊಳ್ಳಲು ಮಕ್ಕಳು ಸರ್ಕಾರಿ ಶಾಲೆಗೆ ಬರುವಂತಾರಗಾಲು ಅಂಗನವಾಡಿಗಳು ಬುನಾದಿಯಾಗಿ ಕೆಲಸ ನಿರ್ವಹಿಸುತ್ತದೆ.
ಪಂಚಾಯಿತಿ ಶಾಲಾ ಮತ್ತು ಶಿಕ್ಷಣ ಅಂಗನವಾಡಿಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ದಯವಿಟ್ಟು ನೀವೆಲ್ಲರೂ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಕೊಡುವಲ್ಲಿ ಸಹಕರಿಸಬೇಕೆಂದು ತಿಳಿಸಿದರು. ಯರಗೇರಾ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 3 ರಿಂದ 4 ಅಂಗನವಾಡಿಗಳನ್ನು ಪ್ರಾರಂಭಿಸಿ ಈಗಾಗಲೇ ಒಂದು ಹಂತದಲ್ಲಿ ಕಾಮಗಾರಿ ನಡೆದಿವೆ ಎಂದು ತಿಳಿಸಿದರು.
ಅದೇ ರೀತಿ ರಂಗನಾಥ್ ದೇವಸ್ಥಾನದ ಕಲ್ಯಾಣಿಗೆ 10ಲಕ್ಷ ರೂಪಾಯಿ ದಾಸ್ತಾನು ಮಳಿಗೆ 14 ಲಕ್ಷ ರೂಪಾಯಿ ಕಾಮಗಾರಿ ಸರಕಾರಿ ಪ್ರೌಢಶಾಲೆ ಮಳೆ ನೀರು ಕೊಯ್ಲು ಕೆಲಸ ಮುಗಿದಿದೆ. ಇನ್ನು ಕೆಲವು ಕೆಲಸಗಳು ಪ್ರಗತಿಯಲ್ಲಿವೆ ಉರ್ದು ಶಾಲೆ ಹತ್ತಿರ ಅಂಗನವಾಡಿ ಕಟ್ಟಡ ಮುಕ್ತಾಯ ಹಂತದಲ್ಲಿದೆ ಉರ್ದು ಶಾಲೆ ಹತ್ತಿರ ಅಂಗನವಾಡಿ ಕೇಂದ್ರದ ಕಾಮಗಾರಿ ನಡೆದಿದೆ ಯರಗೇರಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರಾಥಮಿಕ ಶಾಲೆಯ ಅಡಿಗೆಕೋಣೆ ಬಣ್ಣ ಕೆಲಸ ನಡೆದಿದೆ ಪ್ರೌಢಶಾಲೆ ಅಡಿಗೆಕೋಣೆ ಕೆಲಸ ಪ್ರಾರಂಭವಾಗಿದೆ.
ಗೋಡಿಹಾಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಕಾಂಪೌಂಡ್ ಕೆಲಸ ನಡೆಯುತ್ತಿದೆ ಯರಗೇರಾ ಪೊಲೀಸ್ ವಸತಿ ನಿಲಯದಲ್ಲಿ ಮಳೆ ನೀರು ಕೊಯ್ಲು ಕಾರ್ಯ ಪ್ರಗತಿಯಲ್ಲಿದೆ. ಯರಗೇರಾ ಗ್ರಾಮ ಪಂಚಾಯತ್ ಹೊಸ ಕಟ್ಟಡ ಕೆ.ಇ.ಬಿ ಹತ್ತಿರ 40 ಲಕ್ಷ ರೂಪಾಯಿಯ ಅನುದಾನದಲ್ಲಿ ಪ್ರಗತಿ ಹಂತದಲ್ಲಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉತ್ತಮ ಕೆಲಸ ಪಂಚಾಯತಿಯಲ್ಲಿ ನಡೆದಿರೋದು ತೃಪ್ತಿ ತಂದಿದೆ ಎಂದು ವಿಶ್ವನಾಥ ರೆಡ್ಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು‌.
ಇದೇ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಲಕ್ಷ್ಮೀಕಾಂತ್ ರೆಡ್ಡಿ ಅವರು ರಂಗನಾಥ ದೇವಸ್ಥಾನ ಹತ್ತಿರದ ಕಲ್ಯಾಣಿ ಕಾಮಗಾರಿಯನ್ನು ವೀಕ್ಷಿಸಿ ಉತ್ತಮ ಕೆಲಸ ನಡೆದಿದೆ ಎಂದು ಪ್ರಶಂಸಿದ್ದಾರೆ.