ಯರಗೇರಾ ಉರುಸು, ನಾಳೆ ಆರಂಭ

ರಾಯಚೂರು, ಜ.೧೯- ತಾಲೂಕಿನ ಯರಗೇರ ಹಜರತ್ ಬಡೇಸಾಬ ದರ್ಗಾ ಉರುಸು ಜ.೨೦ ರಿಂದ ೨೨ ವರೆಗೆ ನಡೆಯಲಿದ್ದು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದರ್ಗಾ ಕಮಿತಿ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
೨೦ ರಂದು ಗಂಧ ಮೆರವಣ ಗೆ, ೨೧ ರಂದು ಉರುಸು ಹಾಗೂ ೨೨ ರಂದು ಜಿಯಾರತ್ ಕಾರ್ಯಕ್ರಮಗಳು ನಡೆಯಲಿವೆ. ಎಳ್ಳ ಅಮಾವಾಸ್ಯೆ ನಂತರ ಮೊದಲ ರವಿವಾರ ಅಥವಾ ಎರಡನೇ ರವಿವಾರ ಉರುಸು ಆಚರಿಸಿಕೊಂಡು ಬರಲಾಗುತ್ತಿದೆ. ದರ್ಗಾದ ಸಜ್ಜಾದೆ ಸೈಯದ್ ಹಫಿಜುಲ್ಲಾಖಾದ್ರಿ ಮನೆಯಿಂದ ಗಂಧ ಮೆರವಣ ಗೆ ೨೦ ರಂದು ಪ್ರಾರಂಭವಾಗಿ ಗ್ರಾಮದ ವಿವಿಧ ರಸ್ತೆಗಳ ಮೂಲಕ ೨೧ ರಂದು ಬೆಳಗಿನ ಜಾವ ದರ್ಗಾಕ್ಕೆ ಆಗಮಿಸಲಿದೆ. ರವಿವಾರ ಸರ್ವರ ಭಕ್ತರ ಸಮ್ಮುಖದಲ್ಲಿ ಉರುಸು ನಡೆಯಲಿದೆ. ಸೋಮವಾರದಂದು ಜಿಯಾರತ್ ನಡೆಯಲಿದೆ. ಸರ್ವ ಸಮಾಜಗಳಿಂದ ಪೂಜಿಸಲ್ಪಡುವ ಉರುಸಿಗೆ ಸರಿ ಸುಮಾರು ೧ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಉರುಸಿನ ಅಂಗವಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ ಸೌಲಭ್ಯ ಮಾಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ ದರ್ಗಾ ಆವರಣದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರ ವ್ಯವಸ್ಥೆ ಮಾಡಲಾಗಿದೆ. ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಸಹಕಾರದಿಂದ ವಿದ್ಯುತ್, ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೊಸರಾಜ, ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನಿಸಲಾಗಿದೆ ಎಂದರು. ದರ್ಗಾ ಕಮಿಟಿಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಚುಟವಟಿಕೆ ಪುಸ್ತಕ ಉಚಿತವಾಗಿ ವಿತರಿಸಲಾಗುತ್ತದೆ. ೨೭ ರಂದು ರಕ್ತದಾನ ಶಿಬಿರ ಹಾಗೂಪಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಕಿರು ಚಿತ್ರ ಪ್ರದರ್ಶನ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಉರುಸಿಗೆ ಬರುವ ಭಕ್ತಾದಿಗಳಿಗೆ ಯರಗೇರಾ ಗ್ರಾಮ ಪಂಚಾಯ್ತಿಯಿಂದ ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಪ್ರತಿವರ್ಷದಂತೆ ಈ ವರ್ಷವೂ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ದರ್ಗಾ ಕಮಿಟಿಯ ಸದಸ್ಯರುಗಳಾದ ಮಹಿಬೂಬ ಪಟೇಲ್, ಫಕ್ರುದ್ದೀನ್, ಹಾಜಿ ಮಲ್ಲಂಗ್, ಮಹ್ಮದ ರಫಿ ಉಪಸ್ಥಿತರಿದ್ದರು.