ಯರಗುಡಿ ಕೊಲ್ಲಾಪುರಮ್ಮ ದೇವಸ್ಥಾನಕ್ಕೆ  ಶಾಸಕ ನಾಗೇಂದ್ರ ಲಕ್ಷ ರೂ ದೇಣಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.27: ತಾಲೂಕಿನ ಹೊಸ ಯರಗುಡಿ ಗ್ರಾಮದ ಶ್ರೀ ಕೊಲ್ಲಾಪುರಮ್ಮ ದೇವಿಯ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ 1 ಲಕ್ಷ ರೂಪಾಯಿಗಳ ಧಣಿಗೆಯನ್ನು   ಗ್ರಾಮೀಣ ಶಾಸಕ ಬಿ.ನಾಗೇಂದ್ರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೊಸಯರ್ರಗುಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಎನ್.ಚಂದ್ರಪ್ಪ, ಹೊಸೂರ್ ರವೀಂದ್ರನಾಥ್, ಜಾನಪ್ಪ, ಗಾದಿಲಿಂಗ, ತಿರುಮಲ, ಗಡಂ ಗೋವಿಂದರಾಜುಲು, ಗಡಂ ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ನಾಗರಾಜ್, ಎ.ಸುರೇಶ್ ಇನ್ನು ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.‌‌
ಇನ್ನೇನು ಇದು ಚುನಾವಣೆ ವರ್ಷ ಆಗಿರುವುದರಿಂದ ದೇವರುಗಳಿಗೂ ಸುಗ್ಗಿ ಆರಂಭಗೊಂಡಿದೆ ಎನ್ನಬಹುದು.