ಯಮನ ವೇಷಧರಿಸಿ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ

ವಿಜಯಪುರ, ಏ.27-ನಗರದಲ್ಲಿ ಇಂದು ಗಾಂಧಿ ಚೌಕ ನಲ್ಲಿ ಶಕ್ತಿಕುಮಾರ್ ಕರ್ನಾಟಕ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಯಮನ ವೇಷಧರಿಸಿ ಸಾರ್ವಜನಿಕರಿಗೆ ಕೋವಿಡ್ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಎಲ್ಲರೂ ಮಾಸ್ಕ ಹಾಕಿಕೊಳ್ಳಬೇಕು. ಕೊರೋನೋ ಓಡಿಸಬೇಕು ಎಂಬ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭಲ್ಲಿ ಮಾತನಾಡಿದ ಅವರು, ಹುಲು ಮಾನವರೇ ನೀವು ಮಾಸ್ಕ್ ಕೊಂಡು ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಿ ಎಂದು ಜನರಿಗೆ ಮಾಸ್ಕ್ ಹಂಚಿ ಭೂಲೋಕದಿಂದ ದಿನದಿಂದ ದಿನಕ್ಕೆ ಜನರು ಯಮಲೋಕಕ್ಕೆ ಬಹಳಷ್ಟು ಜನ ಬರುತ್ತಿದ್ದು ಯಮಲೋಕದಲ್ಲಿ ಜನಗಳಿಗೆ ಜಾಗವಿಲ್ಲ ಎಂದು ದೇವಾನುದೇವತೆಗಳು ಹೇಳುತ್ತಿದ್ದಾರೆ ಎಂದು ಯಮ ಜನರ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು ದೇವಾನುದೇವತೆಗಳೇ ಕೋರೋನಾಗೆ ಭಯಪಟ್ಟು ಮಾಸ್ಕ ಹಾಕಿಕೊಂಡು ತಿರುಗಾಡುತ್ತಿದ್ದಾರೆ ನಿಮಗೆ ಜೀವಿಸಬೇಕು ಎಂಬ ಆಸೆ ಇದ್ದರೆ ಮಾಸ್ ಹಾಕಿಕೊಂಡು ತಿರುಗಾಡಿ ಎಂದು ಎಲ್ಲರಿಗೂ ಮಾಸ್ಕ ಹಂಚಿದರು. ಇವರ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.