
(ಸಂಜೆವಾಣಿ ವಾರ್ತೆ)
ಔರಾದ :ಆ.20: ತಾಲೂಕಿನ ಯನಗುಂದಾ ಗ್ರಾಮದ ನೂರಾರು ಶಿವ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಹೊರಟ್ಟಿದ್ದಾರೆ.
ಇದೇ 18 ರಂದು ಶ್ರಾವಣ ಮಾಸದ ನಿಮಿತ ಪ್ರತಿ ವರ್ಷದಂತೆ ಈ ವಷ9ವು ಮಲ್ಲಿಕಾರ್ಜುನನ ದಶ9ನಕ್ಕೆ ತೆರಳಿದ್ದಾರೆ. ತಮ್ಮಲ್ಲಿನ ದುಗು9ಣ, ದುಚ್ಚಟಗಳನ್ನು ಬಿಟ್ಟು ಸದ್ಭಕ್ತಿಯ ಮಾಗ9ದಲ್ಲಿ ಜೀವನ ನಡೆಸಲು ಇವರುಗಳು ಹರಕೆ ಹೊತ್ತಿದ್ದಾರೆ.
ಹಲವು ಜಾತಿಯ ಭಕ್ತರೆ ಏಕತೆಯಿಂದ ಚಿಂತಾಕಿ, ಚಾಂಬೋಳ, ಬೀದರ, ಜಹೀರಾಬಾದ ಮೂಲಕವಾಗಿ ದಿನನಿತ್ಯ ಪ್ರಯಾಣ ಬೆಳಸಿದ್ದು ದಾರಿಯುದ್ದಕ್ಕೂ ಬರುವ ಶಿವ ಮಂದಿರಗಳ ದರ್ಶನ ಪಡೆಯಲಿದ್ದಾರೆ. ಗುರುನಾಥ ಕೆರೆ, ಜನಾರ್ಧನ ರೆಡ್ಡಿ, ಪ್ರಭು ಪಾಟೀಲ, ಬಾಬು ಕುಂಬಾರ, ಛೋಟುಮಿಯಾ, ರಾಜಕುಮಾರ ಪಾಟೀಲ, ಈರಪ್ಪ ಪಾಟೀಲ, ಸಿದ್ದಪ್ಪ ಕೆರೆ, ಚಂದ್ರಶೇಖರ ಪಾಟೀಲ, ಉಮಾಕಾಂತ ರಾಮಾಜಿ, ಬಾಬಗೊಂಡ, ಸಂತೋಷ ಪಾಟೀಲ, ಮಾದೇವ ಸಂಗೂಳಗೆ ಅಲ್ಲದೆ ಇನ್ನು ಹಲವಾರು ಭಕ್ತರು 10 ದಿನಗಳ ಕಾಲ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಪಾದಯಾತ್ರೆ ಸುಖಮಯ ವಾಗಲೆಂದು ಗ್ರಾಮದ ಹಿರಿಯರು ಹಾರೈಸಿ ಬಿಳ್ಕೊಟ್ಟಿದ್ದಾರೆ .28 ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಪಡೆದು ಗ್ರಾಮಕ್ಕೆ ಮರಳಲಿದ್ದಾರೆ.