
ಔರಾದ :ಮೇ.19: ತಾಲೂಕಿನ ಯನಗುಂದಾ ಗ್ರಾಮದಲ್ಲಿ ಸುಮಾರು 2000 ವರ್ಷಗಳ ಹಳೆಯ ಬುದ್ದನ ಮೂರ್ತಿ ಪತ್ತೆಯಾಗಿದೆ. ಸಿಕ್ಕಿದ ಬುದ್ದನ ಮೂರ್ತಿಯ ಕೆಲವೊಂದು ಭಾಗಗಳು ವಿರೂಪಗೊಂಡಿವೆ. ಪ್ರಾಚೀನ ಕಾಲದಲ್ಲಿ ಸಂಘರ್ಷಗಳು ನಡೆದಿರುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಯನಗುಂದಾ ಪ್ರೌಢ ಶಾಲೆಯ ಮುಖ್ಯಗುರುಗಳು ಶಾಮಸುಂದರ ಖಾನಾಪೂರ ಅವರು ಈ ಸಂಗತಿಯನ್ನು ತಿಳಿಸಿದ್ದಾರೆ.
ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಯವರು ಭೇಟಿ ನೀಡಿ ಮೂರ್ತಿ ಪತ್ತೆಯಾದ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ, ಇಂತಹ ಮೂರ್ತಿಗಳನ್ನು ಸಂರಕ್ಷಿಸಲು ಮುಂದೆ ಬರಬೇಕು ಹಾಗು ಮುಂದಿನ ಪೀಳಿಗೆಗೆ ಇವರುಗಳ ಇತಿಹಾಸವನ್ನು ಮರು ಪ್ರಸಾರ ಮಾಡಬೇಕೆಂದು ಮುಖ್ಯಗುರುಗಳ ಅಭಿಪ್ರಾಯವಾಗಿದೆ.