ಯಧುವೀರರಿಗೆ ಹಾಕುವ ಮತ ಚಾಮುಂಡಿಗೆ ಹಾಕುವ ಹೂವಂತೆ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.16:- ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿರುವ ಯಧುವೀರರಿಗೆ ನಾವು ಹಾಕುವ ಒಂದೊಂದು ಮತ ಶ್ರೀ ಚಾಮುಂಡೇಶ್ವರಿ ಹಾಕುವ ಒಂದೊಂದು ಹೂವಿನಂತೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಜಲದರ್ಶಿನಿಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರು ಹಾಗೂ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಬಾಲರಾಜ್ ಅವರಿಗೆ ಆತ್ಮೀಯವಾಗಿ ಸ್ವಾಗತಿಸಿ ಅವರು ಮಾತನಾಡಿದರು. 1987 ರಿಂದ ಬಾಲರಾಜ್ ಅವರೊಂದಿಗೆ ಒಡನಾಟವಿದೆ. ನಾಜೀರ್ ಸಾಬ್, ಅಜೀಜ್ ಸೇಠ್ ಅವರಂತಹ ರಾಜಕಾರಣಿಗಳೊಂದಿಗೆ ಇದ್ದೇವು. ಮೈಸೂರಿನಿಂದಲೇ ಅವರ ಒಡನಾಡಿಗಳು ಹೆಚ್ಚಿದ್ದಾರೆ. ಇಂದಿನ ಸರ್ಕಾರ 10 ರೂಪಾಯಿ ಕೊಟ್ಟಿಲ್ಲ. ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿಲ್ಲ ಎಂದರು.
ಬಿಜೆಪಿಯ ಎಸ್.ಟಿ.ಸೋಮಶೇಖರ್, ಸೋಮಣ್ಣ ಅಭಿವೃದ್ಧಿ ಗೆ ಹಣ ಕೊಟ್ಟರು. ಬೊಮ್ಮಯಿ ಅವರ ನೇತೃತ್ವದಲ್ಲಿ ಮೇಯರ್, ಉಪಮೇಯರ್ ಬಿಜೆಪಿಯನ್ನು ಮಾಡಿದೆವು. ಅಶ್ವಥ್ ನಾರಾಯಣ ಪ್ರಾಮಾಣಿಕ ನಾಯಕರಾಗಿ ಬಂದಿರುವುದು ನಾನು ಭಾಗ್ಯ. ಎಲ್ಲಾ ಸಮುದಾಯದವರು ಎಕ ಮನಸ್ಸಿನಿಂದ ಬಂದೂ ಸೇರಿದ್ದಿರಿ. ಹೈಕಮಾಂಡ್ ನನ್ನ ಕೇಳಿದಾಗ ಮಾಡಿ ಎನಾಗಲ್ಲಾವೆಂದರು.
ಪ್ರತಾಪಸಿಂಹ ಅವರನ್ನು ಅಭ್ಯರ್ಥಿಯಾಗಿ ಕೆಲಸ ಮಾಡಿದ್ದೇವೆ. ಯಾವುದೇ ಹಣಕಾಸಿನ ನೆರವು ಪಡೆಯದೇ ಲೋಕಸಭಾ ಸದಸ್ಯರನ್ನಾಗಿ ಮಾಡಿದ್ದೇವೆ. ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅರಮನೆ ಒಳಗೆ ಇದ್ದರೂ ಸಹ ಸಾಮಾಜಿಕ ಕಳಕಳಿಇದೆ. ಕೃಷ್ಣರಾಜ ಒಡೆಯರ ಕೊಡುಗೆ ಈ ಕಾಲಕ್ಕೆ ಮರೆಯುವಂತದಲ್ಲ. ಜಯಚಾಮರಾಜ ರಾಜೇಂದ್ರ ಒಡೆಯರು ಸ್ವಾರ್ಥಕ್ಕಾಗಿ ಎನನ್ನೂ ಬಳಸಿಕೊಳ್ಳಲಿಲ್ಲ.ಜನಸೇವೆ ಎಲ್ಲವನ್ನು ಮಾಡಿದರೆಂದು ಸ್ಮರಿಸಿಕೊಂಡರು.
ಶ್ರೀಕಂಠದತ್ತನರಸಿಂಹ ರಾಜ ಒಡೆಯರು ಸ್ಪರ್ಧೆಗೆ ನಿಂತಾಗ ರಂಗೋಲಿ ಬಿಟ್ಟು ಸ್ವಾಗತಿಸಿದ್ದರು. ನಾನು ನಿಂತು ಸೋತಿದ್ದು ಒಳ್ಳೆದಾಯಿತು. ಅವರು ಗೆದ್ದ ಮೇಲೆ ಸಹಕಾರ ಭವನ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೊಟ್ಟರು. ಅಂತಹ ಬಾಂಧವ್ಯ ರಾಜಮನೆತನದೊಂದಿಗೆ ಇದೆ. ಯಾರು ಎನೇ ಹೇಳಲಿ. ಎಚ್ ಡಿಕೆ, ಎಚ್ ಡಿಡಿ ಗೆಲ್ಲಿಸಲೇ ಬೇಕೆಂದು ಹೇಳಿದ್ದಾರೆ. ಮೋದಿಯವರು ದೇವೇಗೌಡರ ಮೇಲಿನ ಪ್ರೀತಿಗೆ ನಾವು ಯಾವುದೇ ಕ್ಷೇತ್ರ ಕೇಳುವುದಿಲ್ಲ. ನಾವು ಹಾಸನ, ಮಂಡ್ಯ ಕೋಲಾರವನ್ನಷ್ಟೇ ಕೇಳಿದ್ದೇವೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಲಿದೆ. ಅನುದಾನ ಒಂದು ರೂಪಾಯಿ ಇಲ್ಲದೆ ಕಾಂಗ್ರೆಸ್ ವರ್ಷ ಪೂರೈಸಿದೆ. ಎರಡು ಪಕ್ಷಗಳ ಸೋಲಿನ ಅರಿವು ಇಬ್ಬರಿಗೂ ಆಗಿದೆ. ಇದು ಜನರಿಂದಲೇ ಬಂದ ಹೊಂದಾಣಿಕೆಯ ಕೂಗಾಗಿದೆ. ದೇಶಕ್ಕೆ ಕೊಡಬೇಕಾದ ಒಂದು ಸಂದೇಶವಾಗಿದೆ. ಜಿಟಿಡಿಗೆ ಅನ್ಯಾಯ ಆಗಿದೆ ಎಂದು ಮಂಡ್ಯದಲ್ಲಿ ಹೇಳಿದರು. ಮೈಸೂರು ಸ್ವಾತಂತ್ರ್ಯ ಹೋರಾಟ, ಕಾಂಗ್ರೆಸ್ ಸ್ಥಾಪನೆ ಹಾಗೂ ಬಿಜೆಪಿಗೆ ಭದ್ರ ನೆಲೆ ಕೊಟ್ಟಿದೆ. ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಬಳಿಗೆ ಮೊದಲ ಬಾರಿಗೆ ಬಂದಿದ್ದಾರೆ ಎಂದು ತಿಳಿಸಿದರು.
ರಾಜವಂಶಸ್ಥರ ಕೊಡುಗೆ ತೀರಿಸಲು ಆಗಲ್ಲ.ರಾಜಮನೆತನದ ಋಣ ತೀರಿಸಲು ಇದೊಂದು ಅವಕಾಶ ಕೊಟ್ಟಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದತ್ತ ಎರಡು ಜಿಲ್ಲೆಯ ಜನರು ತಿರುಗಿ ನೋಡುತ್ತಾರೆ. ಯುವರಾಜರು ಎಂಪಿಯಾಗಿ ಹೋದರೆ ಮೋದಿಯವರು ಭೇಟಿಗೆ ಸಿಗುತ್ತಾರೆ. ಹಿಂದೆ ಯಾವ ಸಂಸದ, ಸಚಿವರು ಮಾಡದ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ. ನಮ್ಮ ಸಂಸದ, ನಮ್ಮ ರಾಜ ಎಂಬುದು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಜೆಡಿಎಸ್ ಮತ ಬಿಜೆಪಿಗೆ ಎಂದು ತಿಳಿದುಕೊಳ್ಳಿ ಎಂದು ಹೇಳಿದರು.