ಯದ್ಲಾಪೂರು: ವಿಶ್ವ ಕಾರ್ಮಿಕ ದಿನಾಚರಣೆ

ರಾಯಚೂರು, ಮೇ.೨- ತಾಲೂಕಿನ ಯದ್ಲಾಪೂರು ಗ್ರಾಮ ಪಂಚಾಯತಿಯ ವಡ್ಲೂರು ಗ್ರಾಮದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕರರೊಂದಿಗೆ ವಿಶ್ವ ಕಾರ್ಮಿಕರ ದಿನಾಚರಣೆ ಮಾಡಲಾಯಿತು.
ಮಹಾತ್ಮ ಗಾಂಧಿ ನರೇಗಾ ಯೋಜನೆಡಿ ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ ರೂ ೨೮೯ ಮತ್ತು ಬೆಸಿಗೆ ದಿನಗಳಲ್ಲಿ ಕೆಲಸ ಪರಿಮಾಣಕ್ಕೆ ಶೇ೩೦% ರಿಯಾಯಿತಿ ಸಿಗಲಿದೆ.ಹಾಗೂ ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವುದು, ಅದೇ ರೀತಿಯಾಗಿ ಈ ತಿಂಗಳಿನಿಂದ ಒಂದು ತಿಂಗಳು
ಬದು ಮಾಸಾಚರಣೆ ಪ್ರಾರಂಭವಾಗಲಿದೆ, ತಮಗೆ ಇರುವ ಹೊಲಗಳಲ್ಲಿ ಬದು ನಿರ್ಮಾಣ ಮಾಡಿಕೊಂಡು ಕೂಲಿ ಹಣ ಬರುವುದರೊಂದಿಗೆ ಒಂದು ಅಸ್ತಿ ನಿರ್ಮಾಣವಾಗಲಿದೆ.ಇದರಿಂದಾಗಿ ಮಳೆಗಾಲದಲ್ಲಿ ನಿಮ್ಮ ಹೊಲದಿಂದ ಹರಿದು ಬರುವ ನೀರು ನಿಮ್ಮಹೊಲದಲ್ಲೇಯೆ ತಡೆದು ನೀರು ಮತ್ತು ಮಣ್ಣು ಸಂರಕ್ಷಣೆ ಮಾಡಬೇಕು. ಉತ್ತಮ ಇಳುವರಿ ಬರಲು ಸಾಧ್ಯವಾಗುತ್ತದೆ. ಹಾಗೂ ಬದು ಬೇಸಾಯದಲ್ಲಿ ಬದುಗಳ ಮೇಲೆ ಸಸಿಗಳನ್ನು ನೆಡಲು ಕೂಡ ಅವಕಾಶ ಮಾಡಿಕೊಡಲಾಗಿದೆ ಇದರ ಲಾಭವನ್ನು ಎಲ್ಲಾರು ಪಡೆದುಕೊಳ್ಳಲು ಮತ್ತು ಕೊರೊನಾ ಎರಡನೇ ಅಲೆ ತಿವೃಗತಿಯಲ್ಲಿರುವುದರಿಂದ ಕೋವೀಡ್-೧೯ ನಿಯಮಗಳಾದ ಪರಸ್ಪರ ಅಂತರ ಕಾಯ್ದಿಕೊಳ್ಳುವುದು, ಮಾಸ್ಕ ಧರಿಸುವುದು ನಿರಂತರವಾಗಿ ಕಡ್ಡಾಯವಾಗಿ ಪಾಲಿಸಬೇಂದು.
ಈ ಸಂದರ್ಭದಲ್ಲಿ ಟಿ.ಎ.ಈ ಮೇಟಿ ಕೂಲಿಕಾರರು ಹಾಜರಿದ್ದರು.