ಯದ್ಭವಂ ತದ್ಭವತಿಗೆ ಪ್ರಶಸ್ತಿಗಳ ಸುರಿಮಳೆ

“ಯದ್ಭಾವಂ ತದ್ಭವತಿ” ಚಿತ್ರದ ಚಿತ್ರೀಕರಣ ಚನ್ನಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು  ಸೆನ್ಸಾರ್  ಮಂಡಳಿಯಿಂದ ಯು/ ಎ ಪ್ತಮಾಣಪತ್ರ ನೀಡಿದೆ.ಅಮಿತ್ ರಾವ್  ನಿರ್ದೇಶನ ಹಾಗೂ ನಟನೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ  ಮಹಾರಾಷ್ಟ್ರದ ಔರಂಗಬಾದ್ ದಲ್ಲಿ ನಡೆದ ಅಂತರಾಷ್ಡ್ರೀಯ ಚಿತ್ರೋತ್ಸವದಲ್ಲಿ  ನಟ ಅಮಿತ್ ರಾವ್, “ಅತ್ಯುತ್ತಮ ನಟ” ಪ್ರಶಸ್ತಿ ಮತ್ತು “ಅತ್ಯುತ್ತಮ ಕಥೆ” ಪ್ರಶಸ್ತಿ  ಪಡೆದುಕೊಂಡಿದ್ದಾರೆ. ಹಲವಾರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗಳಲ್ಲಿ  ಈಗಾಗಲೇ 36 ಪ್ರಶಸ್ತಿ ಪಡೆದುಕೊಂಡಿದ್ದು ಈಗ ಪಡೆದಿರುವ 2 ಪ್ರಶಸ್ತಿಗಳನ್ನು ಸೇರಿಸಿ 38 ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದೆ.

ಅತಿ ಶೀಘ್ರದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮುಖಾಂತರ ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು  ಚಿತ್ರದ ನಿರ್ಮಾಪಕರಾದ ಮಂಜುನಾಥ್ ದೈವಜ್ಞ  ಹಾಗು ಅಮಿತ್ ರಾವ್  ತಿಳಿಸಿದ್ದಾರೆ. ಸುದೀಪ್ ಪೆಟ್ರಿಕ್ ಛಾಯಾಗ್ರಾಹಣ, ರಾಕಿ ಸೋನು ಸಂಗೀತ, ಶಿವರಾಜ್ ಮೆಹು  ಸಂಕಲನ, ಸುಪ್ರೀತ್ ಬಿಕೆ,ಡಿಐ ಮತ್ತು ವಿಎಫ್ ಎಕ್ಸ್ , ಸಾಹಿತ್ಯ ನವೀನ್ ರೈ ಸಾಹಿತ್ಯವಿದೆ. ಕಾಸ್ಯೂಮ್ ಡಿಸೈನರ್ ರಶ್ಮಿ ಅನುಪ್ ರಾವ್ ಕಾಸ್ಟೂಮ್ ಡಿಸೈನ್ ಚಿತ್ರಕ್ಕಿದೆ.ಆರ್.ಶ್ರೀನಿವಾಸ ಶೆಟ್ಟಿ, ಸಹ ನಿರ್ಮಾಪಕರಾಗಿದ್ದಾರೆ.