ಯದುವೀರ್‍ಗೆ ವಿಶೇಷ ಶುಭಾಶಯ ಸಲ್ಲಿಕ್ಕೆ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಜೂ.08:- ಯದುವೀರ್ ಒಡೆಯರ್ ಗೆಲುವಿನ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದ ಕ್ಯೂಬ್ ಆರ್ಟಿಸ್ಟ್ ಪ್ರಣವ್ ಪಿ.ವಿನಯ್ ಯದುವೀರ್ ಒಡೆಯರ್ ಭಾವ ಚಿತ್ರವನ್ನು 486 ಕ್ಯೂಬ್ ಬಳಸಿ ಮಾಡುವ ಮೂಲಕ ವಿಶೇಷವಾಗಿ ಶುಭಾಶಯ ಸಲ್ಲಿಸಿದ್ದಾನೆ.
ಮೈಸೂರು ಕೊಡುಗು ಸಂಸದರಾಗಿ ಯದುವೀರ್ ಒಡೆಯರ್ ಆಯ್ಕೆಯಾದ ಬೆನ್ನೆಲ್ಲಿಯೇ ಅವರಿಗೆ ಭರಪೂರ ಶುಭಾಷಯಗಳು ಹರಿದು ಬರುತ್ತಿದ್ದು ಪಿರಿಯಾಪಟ್ಟಣದ 13 ವರ್ಷದ ಈ ಹುಡುಗ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತಿದ್ದು. ಈತ ಪಟ್ಟಣದ ಪಿ.ಎನ್.ವಿನಯ್ ಮತ್ತು ಮೃದುಲ ದಂಪತಿಗಳ ಪುತ್ರನಾಗಿದ್ದು ಈತ ತನ್ನ ಮನೆಯಲ್ಲಿ 486 ಕ್ಯೂಬ್‍ಬಳಿಸಿ ಯದುವೀರ್ ಒಡೆಯರ್ ಭಾವಚಿತ್ರವನ್ನು ರಚಿಸುವ ಮೂಲಕ ಅವರಿಗೆ ಶುಭಾಶಯಕೋರಿದ್ದಾನೆ. ಈ ಹಿಂದೆ ಮೋದಿಯವರ ಬರ್ತಡೆಗೆ ಭಾವಚಿತ್ರ ರಚಿಸಿದ್ದ ಈತ 498 ಕ್ಯೂಬ್ ಬಳಸಿ ಶ್ರೀರಾಮ ಚಿತ್ರ ರಚಿಸಿದ್ದ ಇದಲ್ಲದೆ ವಿವೇಕಾನಂದ, ಶ್ರೀಕೃಷ್ಣ, ವಿರಾಟಕೊಹ್ಲಿ, ರಾಹುಲ್ ದ್ರಾವಿಡ್, ಶಿವರಕುಮಾರಸ್ವಾಮೀಜಿ, ಬಸವಣ್ಣ ಮುಂತಾದವರ ಭಾವಚಿತ್ರ ರಚಿಸಿದ್ದಾನೆ.
ಈತ ರೂಬಿಕ್ಯೂಬ್ಸ್ ಸಾಲೋ ಮಾಡುವ ಪರಿಣಿತಿ ಹೊಂದಿದು 22 ವಿವಿಧ ರೀತಿಯ ಕ್ಯೂಬ್‍ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್‍ರೇಕಾಡ್ರ್‍ಸ ಮಾಡಿದ್ಧಾನೆ. ಇದಲ್ಲದೆ ಇಂಡಿಯಾ ಬುಕ್ ಆಫ್ ರೇಕಾಡ್ರ್ಸ್ ನಲ್ಲಿ ಯೂ ಸಾಧನೆ ಮಾಡಿದ್ಧಾನೆ.