ಯದಾ ಯದಾ ಹಿ ಟ್ರೈಲರ್ ಬಿಡುಗಡೆ

* ಚಿ.ಗೋ ರಮೇಶ್

ಮರ್ಡರ್ ಮಿಸ್ಟ್ರಿಯ ಸುತ್ತಾ ಸಾಗುವ ಕುತೂಹಲಕಾರಿ ತಿರುಳು ಹೊಂದಿರುವ  ” ಯದಾ ಯದಾ ಹಿ”  ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಜೂನ್ 2 ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ತೆಲುಗಿನ ನಿರ್ದೇಶಕ ಅಶೋಕ್ ತೇಜಾ ಆಕ್ಷನ್ ಕಟ್ ಹೇಳಿದ್ದು ರಾಜೇಶ್ ಅಗರ್ ವಾಲ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ತಾರಾ ದಂಪತಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಯಾದ ನಂತರ ಮೊದಲ ಬಾರಿಗೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ದಿಗಂತ್ ಕೂಡ ನಟಿಸಿದ್ದಾರೆ.

ನಟ ದಿಗಂತ್ ಮಾತನಾಡಿ ಚಿತ್ರದಲ್ಲಿ ಒಳ್ಳೆಯ ಕಲಾವಿದರಿದ್ದಾರೆ. ನಿರ್ಮಾಪಕ, ನಿರ್ದೇಶಕರು ತೆಲುಗಿನವರು,  ಚಿತ್ರ ಚೆನ್ನಾಗಿ ಬಂದಿದೆ. ಜನ ನೋಡಿದರೆ  ನಮ್ಮ ಶ್ರಮ ಸಾರ್ಥಕ. ಚಿತ್ರದಲ್ಲಿ  ಖಡಕ್ ಪೊಲೀಸ್ ಅಧಿಕಾರಿಯಾಗಿ  ಕಾಣಿಸಿಕೊಂಡಿದ್ದೇನೆ ಎಲ್ಲಾ ಪಾತ್ರ ಚೆನ್ನಾಗಿ ಮೂಡಿ ಬಂದಿವೆ.ಪೋಲಿಸ್ ಬಟ್ಟೆ ಹಾಕಿದಾಗ ಪೋಟೋ ಶೂಟ್ ಮಾಡಿಕೊಂಡಿದ್ದೇನೆ. ತೆಲುಗಿನ  “ಎವರು”  ಚಿತ್ರದ ರಿಮೇಕ್ ಅದಕ್ಕಿಂತ ಚೆನ್ನಾಗಿ ಬಂದಿದೆ ಎಂದರು.

ಮತ್ತೊಬ್ಬ ನಾಯಕ  ವಸಿಷ್ಟ ಸಿಂಹ  ಕ್ಯಾಮರ ಮುಂದೆ ಅಲ್ಲದೆ ಸೆಟ್ ನಲ್ಲಿ ಆಕ್ಟ್ ಮಾಡಬೇಕಾಗಿತ್ತು,ನನ್ನ ಶೂಟಿಂಗ್ ಇಲ್ಲದಿದ್ದಾಗ ಹರಿಪ್ರಿಯಾಗಾಗಿ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಮ್ಮಿಬ್ಬರ ಲವ್ ಯಾರಿಗೂ ಗೊತ್ತಾಗದ ಹಾಗೆ ನಿರ್ವಹಿಸಿದ್ದೆವು.ಚಿತ್ರಕ್ಕೆ ನನ್ನನ್ನು ಹಾಕಿಕೊಳ್ಳುವಂತೆ  ಹರಿಪ್ರಿಯಾ  ಶಿಫಾರಸ್ಸು ಮಾಡಿದರು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.  ದಿಗಂತ್ ವಿಭಿನ್ನವಾಗಿ ಕಾಣ್ತಾರೆ ಎಂದರು.

ನಾಯಕಿ ಹರಿಪ್ರಿಯಾ  ಮೂರು ಪಾತ್ರದ ಸುತ್ತ ಕಥೆ ಸಾಗಲಿದೆ, ಸಿನಿಮಾ ಚೆನ್ನಾಗಿ ಬರಲಿ ಎನ್ನುವ ಸ್ವಾರ್ಥದಿಂದ ವಸಿಷ್ಢ ಅವರನ್ನು ನಾನೇ ಸಲಹೆ ಮಾಡಿದೆ.ಹೆಣ್ಣುಮಕ್ಕಳಿಗಾಗುವ ತೊಂದರೆಗಳು ಹೊರಗೆ ಬರುವುದಿಲ್ಲ.ಮೂರು ಜನ ಸ್ಮಾರ್ಟ್, ತರಲೆ, ಪ್ರೀತಿ, ಕ್ರೂಯಲ್, ಅಪರಾಧಿ ಯಾರು ಎನ್ನುವುದು ಚಿತ್ರದ ಕುತೂಹಲ ಎಂದರು.

ನಿರ್ದೇಶಕ ಅಶೋಕ ತೇಜಾ,, ನಿರ್ಮಾಪಕ ರಾಜೇಶ್ ಅಗರ್ ವಾಲ್, ಸಹ ನಿರ್ಮಾಪಕ ರಾಮ್ ಕಿಶೋರ, ಸುಮನ್ ಪ್ರಸಾದ್ ಮಾಹಿತಿ ಹಂಚಿಕೊಂಡರು.