ಯತ್ನಾಳ ಗೆಲುವು ಆಲಮೇಲದಲ್ಲಿ ವಿಜಯೋತ್ಸವ

ಆಲಮೇಲ:ಮೇ.16:ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವನಗೌಡ ಪಾಟೀಲ ಯತ್ನಾಳ ಗೆಲುವಿನ ಹಿನ್ನಲೆಯಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಸಂಘದ ಕಾರ್ಯಕರ್ತರು ಬಜಾರಿನವನಲ್ಲಿಇರುವ ಶ್ರೀರಾಮ ಮಂದಿರ ಮುಂದೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು .
ನಂತರ ಸಂಘದ ಅಧ್ಯಕ್ಷ ಅಜಯಕುಮಾರ ಬಂಟನೂರ ಮಾತನಾಡಿ ಬಸವನಗೌಡ ಪಾಟೀಲ ಯತ್ನಾಳರ ಗೆಲುವು ಹಿಂದುತ್ವದ ಗೆಲುವು ಇವರ ಗೆಲುವು ಜಿಲ್ಲೆಯಲ್ಲಿ ಬಿಜೆಪಿಯ ಬಲಿಷ್ಠಗೆಲುವು ಆಗಿದೆ ಎಂದು ಹೇಳಿದರು

ವಿಜಯೋತ್ಸವದಲ್ಲಿ ಕಮಲಾಕರ ಪತ್ತಾರ ವಿನಾಯಕ ಬಿರಾದರ ಅಕ್ಷಯ ಅಂಬೋರೆ ಬೂಸರಾಜ ಶಿರಸಗಿ ವಿರೇಶ ಪತ್ತಾರ ಅಶೋಕ ಪತ್ತಾರ ಮುಂತಾದವರು ಇದ್ದರು