ಯತ್ನಾಳ್ ಗೆ ಏಕವಚನದಲ್ಲೆ ವಾಗ್ಧಾಳಿ ನಡೆಸಿದ ರೇಣುಕಾಚಾರ್ಯ

ದಾವಣಗೆರೆ.ಮಾ.೨೧; ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಶಾಸಕ ಬಸವನಗೌಡ ಯತ್ನಾಳ್ ನೀಡಿರುವ ಹೇಳಿಕೆಗೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯತ್ನಾಳ್ ವಿರುದ್ಧ ಏಕವಚನದಲ್ಲೆ ವಾಗ್ಧಾಳಿ ನಡೆಸಿರುವ   ಎಂಪಿ ರೇಣುಕಾಚಾರ್ಯ ತಾಖತ್ ಇದ್ದರೆ ಮುಖ್ಯಮಂತ್ರಿ ಬದಲಾವಣೆ ಮಾಡಿನೋಡು ಎಂದು ಸವಾಲು ಹಾಕಿದ್ದಾರೆ.ಹೊನ್ನಾಳಿ ತಾಲೂಕಿನ ಹೊಳೆಹರಳಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು, ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು.ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಶಾ, ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ  ಮಾತನಾಡುತ್ತೀಯ..ನೀನೇ ದೊಡ್ಡ ಭ್ರಷ್ಠ, ನೀನು ಕಾಂಗ್ರೇಸ್ ಏಜೆಂಟ್ ನ ಹಾಗೆ ಮಾತನಾಡುತಿದ್ದೀಯಾ.ನಿನ್ನ ಹೇಳಿಕೆಯ ಹಿಂದೆ ಕಾಂಗ್ರೆಸ್ ನವರ ಕೈವಾಡವಿದೆ ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ.ವಿಧಾನಸಭೆ ಮೊಗಸಾಲೆಯಲ್ಲಿ ೨೦ ರಿಂದ ೨೫ ಜನ ಶಾಸಕರು ಕುಳಿತು ಮಾತನಾಡಿದ್ದೇವೆ ಯತ್ನಾಳ್ ರನ್ನ  ಬಿಜೆಪಿಯಿಂದ ಉಚ್ಚಾಟನೆ ಮಾಡಲು  ಒತ್ತಾಯ ಮಾಡಿದ್ದೇವೆ.ನಾಳೆ ಸೋಮವಾರ ಎಲ್ಲ ಶಾಸಕರು ಸೇರುತ್ತೇವೆ  ಸರಿಯಾದ ಉತ್ತರವನ್ನ ಕೊಡುತ್ತೇವೆ ಎಂದಿದ್ದಾರೆ.