ಯತ್ನಾಳರಿಂದ ಮತದಾನ

ವಿಜಯಪುರ:ಮೇ.10: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದೆ. ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಕುಟುಂಬ ಸಮೇತರಾಗಿ ನಗರದ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಮತಗಟ್ಟೆ 61ರಲ್ಲಿ ಸಾಮಾನ್ಯರಂತೆ ಸರದಿಯಲ್ಲಿ ನಿಂತು ತಮ್ಕ ಹಕ್ಕು ಚಲಾಯಿಸಿದರು.
ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಕನಿಷ್ಟ 130ಸ್ಥಾನಗಳಿಸಲಿದೆ. ವಿಜಯಪುರ ಜಿಲ್ಲೆಯಲ್ಲಿ 8 ಮತಕ್ಷೇತ್ರದಲ್ಲಿ ಎಷ್ಟು ಸ್ಥಾನ ಬರುತ್ತದೆ ಎಂದು ಭವಿಷ್ಯ ನುಡಿಯಲು ಆಗುವದಿಲ್ಲ, ಆದರೆ ಸರ್ಕಾರ ಬಿಜೆಪಿಯೇ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾದಿಂದ ಬಂದ ಗೂಳೆ ಹೋದವರು: ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಮತ ಚಲಾಯಿಸಲು ಗೋವಾಕ್ಕೆ ದುಡಿಯಲು ಹೋಗಿದ್ದ ಕಾರ್ಮಿಕರು ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಬೆಳಗ್ಗೆ ಬಂದಿಳಿದರು. ನಂತರ ತಮ್ಮತಮ್ಮ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.
ಭೂಸನೂರ ಮತ ಚಲಾವಣೆ:
ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮತ ಚಲಾವಣೆ ಮಾಡಿದರು.
ಕ್ಷೇತ್ರದ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದ ಮತಗಟ್ಟೆ 9 ರಲ್ಲಿ ಪತ್ನಿ ಲಲಿತಾಬಾಯಿ, ಪುತ್ರ ಡಾ ಮಂಜುನಾಥ ಹಾಗೂ ಬೆಂಬಗಲಿಗರೊಂದಿಗೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.
ವಿಕಲಚೇತನರ ಉತ್ಸಾಹ:
ವಿಕಲಚೇತನ ತಮ್ಮ ನನ್ನು ಹೆಗಲ ಮೇಲೆ ಹೊತ್ತು ಅಣ್ಣ ಮತಗಟ್ಟೆಗೆ ಆಗಮಿಸಿದ್ದು ಗಮನ ಸೆಳೆಯಿತು.
ಅಣ್ಣನ ಸಹಾಯದೊಂದಿಗೆ ಬಂದು ವಿಕಲಚೇತನ ಅಬ್ದುಲ್ ಹಮೀದ್ ಮತ ಚಲಾವಣೆ ಮಾಡಿದರು.
ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲ್ ಆವರಣದಲ್ಲಿ ರುವ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿದನು.
ಇನ್ನುಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಓಟ್ ಮಹಿಳೆಯರು, ಪುರುಷರು, ಇಳಿ ವಯಸ್ಕರು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ.