ಯತ್ನಾಳರನ್ನು ಸಿಎಂ ಎಂದು ಘೋಷಿಸಲು ಒತ್ತಾಯ

ಮುದ್ದೇಬಿಹಾಳ:ಜು.22:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವಯಸ್ಸು ಹೆಚ್ಚಾಗಿದೆ ಈ ಹಿನ್ನೇಲೆಯಲ್ಲಿ ಬಿಜೆಪಿ ಹೈಕಮಾಂಡ ಸಧ್ಯ ಸಿ ಎಂ ಬದಾವಣೆ ಕುರಿತು ಕೈಗೊಂಡಿರುವ ನಿರ್ಧಾರ ಅತ್ಯಂತ ಸೂಕ್ತವಾಗಿದೆ. ಈ ವೇಳೆ ಬದಲಾವಣೆ ಮಾಡಿದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎಂದು ಪುರಸಭೆ ಸದಸ್ಯ ವಿರೇಶ ಹಡಲಗೇರಿ ಒತ್ತಾಯಿಸಿದ್ದಾರೆ.

ಪಟ್ಟಣದ ಪುರಸಭೆಯಲ್ಲಿ ಬುಧವಾರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು ಈಗಾಗಲೇ ಲಿಂಗಾಯತ್ ಒಳಪಂಗಡದಲ್ಲಿಯೇ ರಾಜ್ಯದಲ್ಲಿ ಲಿಂಗಾಯತ್ ಪಂಚಮಸಾಲಿ ಸಮೂದಾಯದವರು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದು ಕಳೇದ ಲಿಂಗಾಯತ್ ಪಂಚಮಸಾಲಿ ಕೂಡಲಸಂಗಮದ ಬಸವಜಯಮೃತ್ಯುಂಜಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಬೆಂಗಳುರಿನಲ್ಲಿ ನಡೆದ ಬ್ರಹತ್ ಸಮಾವೇಶ ಸಾಕ್ಷೀಯಾಗಿದೆ.

ಅದರಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ಲಿಂಗಾಯತ್ ಪಂಚಮಸಾಲಿ ಸಮೂದಾಯದ ಪ್ರಭಾವಿ ನಾಯಕರಾಗಿದ್ದಾರೆ ಮಾತ್ರವಲ್ಲದೇ ಯಾವೂದೇ ಕಪ್ಪು ಚುಕ್ಕೆ ಇಲ್ಲದ ಸನ್ನಡತೆ ವ್ಯಕ್ತಿಯವನ್ನು ಹೊಂದಿದ್ದಾರೆ ಜತೆಗೆ ಸದಾ ಜನ ಹಿತ ರೈತ ಹಿತ ಸೇರಿದಂತೆ ಎಲ್ಲ ಅಭಿವೃದ್ಧಿಯ ಕನಸುಹೊತ್ತುಕೊಂಡಿರುವ ಮಹಾನ ವ್ಯಕ್ತಿಯಾಗಿದ್ದಾರೆ. ಹಾಗೂ ಎರಡು ಸಂಸದರಾಗಿ ಕೇಂದ್ರ ಸಚೀವರಾಗಿ ಒಂದು ಶಾಸಕರಾಗಿ ಉತ್ತಮ ಆಡಳಿತ ನಡೆಸಿದ ಹಿರಿಯ ಅನುಭವಿಯಾಗಿದ್ದಾರೆ. ಕಾರಣ ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ ಯತ್ನಾಳ ಅವರು ಯೋಗ್ಯ ಅರ್ಹ ವ್ಯಕ್ತಿಗಳೇಂದು ಪರಿಗಣಿಸಿ ಮುಂದಿನ ಸಿ ಎಂ ಅಭ್ಯರ್ಥಿಗಳೇಂದು ಘೋಷಿಸಬೇಕು.