ಯತ್ನಾಳರನ್ನು ವಿರೋಧಪಕ್ಷದ ನಾಯಕರನ್ನಾಗಿ ಮಾಡಿ

ತಾಳಿಕೋಟೆ:ಜೂ.21: ವಿಜಯಪುರ ನಗರದ ಶಾಸಕರಾಗಿರುವ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ವಿಧಾನಸಭೆಯ ವಿರೋಧಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕೆಂದು ಬಿಜೆಪಿ ವರಷ್ಠರಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಬಿಜೆಪಿ ಯುವ ಮುಖಂಡ ನಾಗರಾಜ ಬಳಿಗಾರ ಅವರು ಒತ್ತಾಯಿಸಿದ್ದಾರೆ.

ಬಸನಗೌಡ ಪಾಟೀಲ(ಯತ್ನಾಳ) ಅವರು ಅಟಲ್‍ಬಿಹಾರಿ ವಾಜಪೇಯಿ ಅವರ ಗರಡಿಯಲ್ಲಿ ಬೆಳೆದಂತಹ ವ್ಯಕ್ತಿಯಾಗಿದ್ದಾರೆ ಮತ್ತು ಗ್ಯಾರೆಂಟಿಗಳನ್ನು ಜನರ ಕಣ್ಣಿಗೆ ಮೋಸವೆಸಗುವಂತಹ ಕಾರ್ಯ ಮಾಡುತ್ತಿರುವ ಕಾಂಗ್ರೇಸ್ ಸರ್ಕಾರದ ವಿರೂದ ಹೋರಾಡುವಂತಹ ದಿಟ್ಟೆದೆಯ ವ್ಯಕ್ತಿತ್ವ ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ ಇವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಬಲ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಗ್ಯಾರೇಂಟಿ ಯೋಜನೆಗಳ ಜಾರಿಯಿಂದ ರಾಜ್ಯದ ಆರ್ಥಿಕತೆ ಎಂಬುದು ಹದಗೆಡುವ ಸಾದ್ಯತೆಗಳಿದ್ದು ಮತ್ತು ರಾಜ್ಯ ಸರ್ಕಾರವು ದಿವಾಳಿಯ ಅಂಚಿಗೆ ಬರಲಿ ಅಲ್ಲದೇ ವಿದ್ಯುತ್ ಬಿಲ್ ಒಳಗೊಂಡಂತೆ ಅನೇಕ ರೀತಿಯ ದಿನಬಳಿಕೆಯ ವಸ್ತುಗಳ ಮೇಲೆ ಟ್ಯಾಕ್ಸ್ ರೂಪದಲ್ಲಿ ಒಸಲಿ ಮಾಡಲು ಸರ್ಕಾರವು ಚಿಂತನೆ ನಡೆಸಿದ್ದು ಇದನ್ನು ಸಮರ್ಥವಾಗಿ ಎದುರಿಸುವಂತಹ ವ್ಯಕ್ತಿಯಾಗಿರುವ ಯತ್ನಾಳ ವರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಬಿಜೆಪಿ ವರಷ್ಠರಲ್ಲಿ ಬಿಜೆಪಿ ಯುವ ಮುಖಂಡ ನಾಗರಾಜ ಬಳಿಗಾರ ಅವರು ಒತ್ತಾಯಿಸಿದ್ದಾರೆ.