
ಮುದ್ದೇಬಿಹಾಳ: ಮೇ.16:ಬಿಜೆಪಿ ಫೈರಬ್ಯ್ರಾಂಡ್ ಹಿಂದುತ್ವದ ಸಿದ್ದಾವನ್ನು ಮೈಗೂಡಿಸಿಕೊಂಡ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಅವರನ್ನು ಬಿಜೆಪಿ ಕೇಂದ್ರ ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ವಿಧಾನಸಭಾ ವಿರೋಧಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರು ಒತ್ತಾಯಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ಈ ಹಿಂದೆ ವಿಜಯಪುರ ಜಿಲ್ಲೆಯ ಎರಡು ಬಾರಿ ಸಂಸಧರಾಗಿ ಅಜಾತಶತ್ರು ದಿ, ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರ ನೇತೃತ್ವದ ಎನ್ ಡಿ ಎ ಸರಕಾರದ ಸಂಪುಟದಲ್ಲಿ ರಾಜ್ಯ ಸಚೀವರಾಗಿ, ಒಂದುಬಾರಿ ಬಾಗಲಕೋಟ ವಿಜಯಪುರ ಅವಳಿ ಜಿಲ್ಲೆಯ ವಿಧಾನಪರಿಷತ್ ಸದಸ್ಯರಾಗಿ ಮಾತ್ರವಲ್ಲದೇ ಪ್ರಭಲ ಲಿಂಗಾಯತ ಸಮೂದಾಯ ನಾಯಕರಾಗಿ ಜೊತೆಗೆ ಹಿಂದುತ್ವದ ಸಿದ್ದಾಂತದ ಮೇಲೆ ನೇರ ನಿಷ್ಟುರ ರಾಜಕಾರಿಣಿಯಾಗಿ ಬೆಳೆದು ನಿಂತಿದ್ದಾರೆ.
ಕಳೇದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧಿಕಾರದಲ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರದ ಅಧಿಕಾರವಧಿಯಲ್ಲಿಯೂ ಸಹ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಅವರನ್ನು ಸಚಿವ ಸ್ಥಾನವಾಗಲಿ ಅಥವಾ ಉನ್ನತ ಸ್ಥಾನ ಮಾನ ನೀಡದೇ ಇರುವುದರಿಂದ ಸಧ್ಯ ರಾಜ್ಯದಲ್ಲಿಂದು ಕಾಂಗ್ರೇಸ್ ಬರ್ಜರಿ ಜಯಗಳಿಸಲು ಸಾಧ್ಯವಾಗಿದೆ.
ಸದಾ ಹಿಂದುತ್ವದ ಸಿದ್ದಾಂತದ ಮೇಲೆ ರಾಜಕಾರಣ ಮಾತ್ರವಲ್ಲದ ಹಿಂದುಗಳ ರಕ್ಷಣೆಗೆ ನಿಂತ ರಾಜ್ಯದ ಏಕೈಕ ರಾಜಕಾರಿಣಿ ಬಸನಗೌಡ ಪಾಟೀಲ(ಯತ್ನಾಳ)ರ ಎಂದರೆ ತಪ್ಪಾಗಲಾಗರದು. ಇದರಿಂದಾಗಿಯೇ ಅವರು ಎಲ್ಲೇ ಭಾಷಣ ಮಾಡಿದರೂ ಸಾವಿರ ಲಕ್ಷಾಂತರ ಹಿಂದು ಕಾರ್ಯಕರ್ತರು ಜಯಘೋಷದಿಂದ ಅಪಾರ ಬೆಂಬಲ ನೀಡಿ ಗೌರವಿಸಿದ್ದಾರೆ. ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆ, ಹಾಗೂ ಲೋಕಸಭಾ ಚುನಾವಣೆಯ ಎದರಿಸಲು ರಾಜ್ಯದಲ್ಲಿ ಹಿಂದೂ ಪವರಫುಲ್ ನಾಯಕನ ಅವಶ್ಯಕತೆ ಇದೇ ಹಾಗೇ ಸಧ್ಯ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಸ್ವತಂತ್ರ ಸರಕಾರ ರಚನೆಯ ತರಾತರಿಯಲ್ಲಿದೆ ವೇಳೆ ಕಾಂಗ್ರೇಸ್ ಸರಕಾರವನ್ನು ಕಟ್ಟಿಹಾಕಲು ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಕೇಂದ್ರ ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ವಿಧಾನಸಭಾ ವಿರೋಧಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ಒತ್ತಾಯಿದರು.