ಯತ್ನಾಳಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲು ಒತ್ತಾಯ

ಬಸವನಬಾಗೇವಾಡಿ:ಮೇ.19: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ಮುಖಂಡ ನ್ಯಾಯವಾದಿ ವಿಜಯ ಕಲ್ಲೂರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಹಗಲಿರುಳು ಶ್ರಮಿಸಿರುವ ಯತ್ನಾಳ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ರಾಜ್ಯ ಸಂಚರಿಸಿದ್ದಾರೆ ಅಲ್ಲದೆ ತಮ್ಮ ನೇರ ನುಡಿಯ ಮೂಲಕ ರಾಜ್ಯದಲ್ಲಿ ತಮ್ಮದೆ ಆದ ವರ್ಚಸ್ಸನ್ನ ಬೆಳಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಹೆಳಿದರು.