ಯಡ್ರಾಮಿ ತಾ.ಪಂ.ನಲ್ಲಿ ಹಣ ದುರುಪಯೋಗ: ಆರೋಪ

ಮಡಿವಾಳಪ್ಪ ಟಿ. ಯತ್ನಾಳ
ಯಡ್ರಾಮಿ,ಜೂ.7-ತಾಲೂಕು ಪಂಚಾಯತಿಯ ಅನಿಭರ್ಂದಿತ ಯೋಜನೆಯಲ್ಲಿ ರಿಪೇರಿ ಕಾಮಗಾರಿ ಮಾಡದೇ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಸಿಲು ನಾಡಿನ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶಪೀ ಉಲ್ಲಾ ದಖನಿ ಆರೋಪಿಸಿದ್ದಾರೆ.
ತಾಲೂಕು ತಾಲೂಕು ಪಂಚಾಯತಿಯಾಗಿ ಹಲವಾರು ವರ್ಷಗಳು ಕಳೆದರೂ ಕೂಡ ಚುನಾವಣೆ ಆಗದೆ ಚುನಾಯಿತ ಸದಸ್ಯರು ಇಲ್ಲದೆ ಇರುವದರಿಂದ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಅಧಿಕಾರಿಗಳು ಆಡಳಿತ ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತಿ ಕಾರ್ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸದಿದ್ದಲ್ಲಿ ತಾಲೂಕಿನಲ್ಲಿ ಉಗ್ರಹವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಲೂಕಿನ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಬಿಲ್ ಮಾಡಲಾಗಿದ್ದು, ಯಾವುದೇ ದುರುಪಯೋಗ ಕಂಡು ಬಂದಿಲ್ಲ.

-ಮಹಾಂತೇಶ ಪುರಾಣಿಕ, ಪ್ರಭಾರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಯಡ್ರಾಮಿ.

ಸ್ಥಳೀಯರನ್ನು ಪ್ರಭಾರಿ ತಾಲೂಕು ಪಂಚಾಯತಿ ಅಧಿಕಾರಿಗಳಾಗಿ ನೀಡಿದ್ದರಿಂದ ಎಲ್ಲಾ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ತಕ್ಷಣ ತನಿಖೆ ಮಾಡಿ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
—ಶಪೀ ಉಲ್ಲಾ ದಖನಿ, ಬಿಸಿಲು ನಾಡಿನ ಹಸಿರು ಸೇನಯ ಜಿಲ್ಲಾ ಅಧ್ಯಕ್ಷರು.