ಯಡ್ರಾಮಿ ಠಾಣೆಯ ಚಿತ್ರಣವನ್ನೇ ಬದಲಿಸಿದ ಪಿ.ಎಸ್.ಐ ಸಾರ್ವಜನಿಕ ಮತ್ತು ಸಿಬ್ಬಂದಿ ಮನವಲಿಸಿ ಅಭಿವೃದ್ಧಿ ಕಾರ್ಯ

ಯಡ್ರಾಮಿ:ಏ.10:ಪೆÇಲೀಸ್ ಠಾಣೆಯ ಚಿತ್ರಣವನ್ನೇ ಬದಲಾವಣೆ ಮಾಡಿ ಯಡ್ರಾಮಿ ತಾಲ್ಲೂಕಿನ ಪ್ರತಿಯೊಬ್ಬರು ಹೋಟೆಲ್ ಸಾರ್ವಜನಿಕ ಸ್ಥಳಗಳಲ್ಲಿ ಜನರು ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗಳು ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಡ್ರಾಮಿ ತಾಲ್ಲೂಕಿನ ಹೊಸ ಪೆÇಲೀಸ್ ಠಾಣೆಯು 2007 ರಲ್ಲಿ ಉದ್ಘಾಟನೆಗೊಂಡು 17 ವರ್ಷಗಳಲ್ಲಿ 33 ಪಿ.ಎಸ್.ಐ ಅಧಿಕಾರಿಗಳು ಕಾರ್ಯನರ್ವಹಿಸಿದ್ದಾರೆ.

ಯಾವುದೇ ಅಧಿಕಾರಿಗಳು ಮಾಡದ ಅಭಿವೃದ್ಧಿ ಪ್ರಭಾರಿಯಾಗಿ ಬಂದ 34 ಪಿ.ಎಸ್.ಐ ವಿಶ್ವನಾಥ ಮುದರೆಡ್ಡಿ ಅವರು ಬಂದ ಕೇವಲ 12 ದಿನದಲ್ಲಿ ಸಿ.ಸಿ.ರಸ್ತೆ ಗಾರ್ಡನ್ ನಿರ್ಮಾಣ ಮಾಡಿ ಜನಮನದಲ್ಲಿ ಶಾಸ್ವತವಾಗಿ ಉಳಿಯುವ ಕಾರ್ಯ ಮಾಡಿದ್ದಾರೆ.

ಪೆÇಲೀಸ್ ಠಾಣೆ ಅಂದ್ರೆ ಸಾರ್ವಜನಿಕರು ಭಯ ಪಡುವ ದಿನಮಾನದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿ ಠಾಣೆಗೆ ಬಂದು ಒಂದು ಹೊತ್ತು ಕುಳಿತುಕೊಂಡು ವಿಶ್ರಾಂತಿ ಪಡೆಯಬೇಕು ಎಂದು ಅನಿಸುವ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಠಾಣೆಯ ಅಧಿಕಾರ ವಹಿಸಿಕೊಂಡು ಠಾಣೆಯ ಸಿಬ್ಬಂದಿವರ್ಗ ಮತ್ತು ತಾಲೂಕಿನ ಸಾರ್ವಜನಿಕ ಮನವನ್ನು ಒಲಿಸಿಕೊಂಡು.ಹಣದ ಸಹಕಾರ ಪಡೆದುಕೊಂಡು.ಠಾಣೆಯ ಸಂಪೂರ್ಣ ಚಿತ್ರಣ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಠಾಣೆಯ ಆವರಣದಲ್ಲಿ ಮಳೆ ಬಂದ್ರೆ ಸಾಕು ನೀರು ತುಂಬಿಕೊಳ್ಳುತ್ತಿತ್ತು.ಅದನ್ನು ಮೊದಲಿಗೆ ಸಂಪೂರ್ಣ ಸಿ.ಸಿ.ರಸ್ತೆ ನಿರ್ಮಾಣ ಮಾಡಿ ಸುತ್ತಲು ಸಸಿಗಳನ್ನು ನೆಟ್ಟು ಅಂಧವಾದ ಪರಿಸರ ನಿರ್ಮಾಣ ಮಾಡಿದ್ದಾರೆ.

ತಾಲೂಕಿನ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿವರ್ಗದವರಿಗೆ ತಮ್ಮ ಠಾಣೆಯ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂದು ಮನವಿಯಿಂದ ಸಹಕಾರ ಮಾಡಿದ್ದಾರೆ ಎಂದು ಠಾಣೆಯ ಪಿ.ಎಸ್.ಐ ತಿಳಿಸಿದರು.


ಸರಕಾರ ಮಾಡದೇ ಇರುವಂತಹ ಅಭಿರುದ್ದಿ ತಾಲ್ಲೂಕಿನ ನಾಗರಿಕರಿಗೆ ಸಿಬ್ಬಂದಿಗಳನ್ನು ಮನವಲಿಸಿಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡುದ್ದು.ಇತರ ತಾಲೂಕಿನ ಅಧಿಕಾರಿಗಳಿಗೆ ಮಾದರಿಯಾಗಿದ್ದು ತಾಲೂಕಿನ ಪರವಾಗಿ ಅಭಿನಂದನೆಗಳು.

ಈರಣ್ಣ ಬಜಂತ್ರಿ ಹಸಿರು ಸೇನೆ ಕರ್ನಾಟಕ ರಾಜ್ಯ ರೈತ ಸಂಘಟನೆ ತಾಲೂಕು ಅಧ್ಯಕ್ಷರು ಯಡ್ರಾಮಿ.


ಠಾಣೆಯ ಸಿಬ್ಬಂದಿ ಮತ್ತು ಮುಖ್ಯವಾಗಿ ತಾಲೂಕು ಜನರ ಸಹಕಾರದಿಂದ ಈ ಅಭಿವೃದ್ಧಿಯಾಗಿದ್ದು ಈ ಅಭಿವೃದ್ಧಿ ಅವರಿಗೆ ಸಲ್ಲುತ್ತದೆ.

—ವಿಶ್ವನಾಥ ಮುದರಡ್ಡಿ ಪಿ.ಎಸ್.ಐ ಯಡ್ರಾಮಿ ಠಾಣೆ.


–ಠಾಣೆಯಲ್ಲಿ ಸಿ.ಸಿ.ರಸ್ತೆ ಗಾರ್ಡನ್ ನಿರ್ಮಾಣ.

–ಠಾಣೆಯ ಸಂಪೂರ್ಣ ವಿದ್ಯುತ ದುರಸ್ತಿ.

–ಠಾಣೆಯ ಬರಹಗಾರರ ತನಿಖಾ ಗಣಕಯಂತ್ರ ಅಲುಮಿನಿಯಂ ಕೋಣೆಗಳು ನಿರ್ಮಾಣ.

–ಠಾಣೆಯ ಸಂಪೂರ್ಣ ಕಟ್ಟಡಕ್ಕೆ ಬಣ್ಣ ಸುಣ್ಣ

–ಸೌಚಾಲಯಗಳಿಗೆ ಸಿಂಟೆಕ್ಸ್ ಅಳವಡಿಕೆ.

–ವಾಹನ ನಿಲುಗಡೆ ಪಾಕಿರ್ಂಗ ವ್ಯವಸ್ಧೆ.