ಕಲಬುರಗಿ,ಜೂ 17:ಯಡ್ರಾಮಿ ತಾಲೂಕಿನ ವಿವಿಧ ಗ್ರಾಮಗಳಗೆ ಮಳೆ ಬಾರದ ಕಾರಣ ಹಳ್ಳ, ಕೆರೆ, ಭಾವಿ ಬತ್ತಿರುವುದರಿಂದ ಜನ ಜಾನುವಾರುಗಳಿಗೆ ತೊಂದರೆಯಾಗಿದ್ದು, ನಾರಾಯಣಪುರ ಎಡದಂಡೆ ನಾಲೆಯ ಇಂಡಿ ಶಾಖಾ ಕಾಲುವೆಯಿಂದ ನೀರು ಬಿಡುವಂತೆ ವಿವಿಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಯಡ್ರಾಮಿ ತಾಲೂಕಿನ ನಾಗರಹಳ್ಳಿ, ಮಳ್ಳಿ, ಕುಳಗೇರಿ, ಬಿರಾಳ ಹಿಸ್ತಾ, ಅಲ್ಲಾಪುರ, ಕಾಚಾಪುರ, ದುಮದ್ರಿ, ಐನಾಪುರ, ಮಾಗಣಗೇರಿ, ಕಣಮೇಶ್ವರ, ಕೊಂಡಗುಳಿ, ಹಂಚನಾಳ, ಯತ್ನಾಳ, ಕಡಕೋಳ, ಅಖಂಡಹಳ್ಳಿ, ಇನ್ನೂ ಅನೇಕ ಗ್ರಾಮಗಳಲ್ಲಿ ಜನ ಜಾನುವಾರಗಳಿಗೆ ಕುಡಿಯುವ ನೀರಿನ ತೀವ್ರ ಅಭಾವವಾಗಿದ್ದು, ಕಾರಣ ನಾರಾಯಣಪೂರ ನಾಲೆಯ ಇಂಡಿ ಶಾಖಾ ಕಾಲುವೆಯಿಂದ ನೀರು ಬಿಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿರಾದಾರ, ಬಸಲಿಂಗ ಗುಂಡಪ್ಪ ನಗನೂರ, ಹಳ್ಳೆಪ್ಪಾ ಎನ್ ನಾಟೀಕಾರ, ಗಿರಿಮಲ್ಲಪ್ಪ ಎಸ್ ಮಾಲಿ ಪಾಟೀಲ, ಗಂಗಣ್ಣ ಮೊರಟಗಿ, ಶಿವಶಂಕರ್ ಬಿರಾಳ ಹಿಸ್ಸಾ,ದೇವಿಂದ್ರ ಸಜ್ಜನ ,ಸಾಂಬಶಿವ ಹಿರೇಮಠ, ಮಹಾದೇವಪ್ಪ ಸಾವಳಗಿ, ಮಹಾಂತಗೌಡ ಪಾಟೀಲ್, ಕೇಶಣಗೌಡ ಮಾಲಿ ಪಾಟೀಲ, ದೊಡ್ಡೇಶ ಅಪ್ಪುಗೌಡ ರಮೇಶ್ ಮಲ್ಲಯ್ಯ ಹಿರೇಮಠ,ಬೀರಪ್ಪ ಬಸವಂತ್ರಾಯ ಚಂದ್ರಕಾಂತ ಬಾಬು ಬಸವರಾಜ ಸುಂಬಡ, ದಯಾನಂದ ಸಂತೋಷ ಹೊನ್ನಳ್ಳಿ, ಸಂತೋಷ ಬಿರಾದಾರ ಸೇರಿದಂತೆ ಇತರರಿದ್ದರು.