ಯಡ್ಡಳ್ಳಿ: ‘ದುಡಿಯೋಣ ಬಾ’ ಕಾರ್ಯಕ್ರಮಕ್ಕೆ ಚಾಲನೆ

ಯಾದಗಿರಿ;ಮಾ.23: ತಾಲ್ಲೂಕಿನ ಬಂದಳ್ಳಿ ಗ್ರಾಮ ಪಂಚಾಯಿತಿಯ ಯಡ್ಡಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಪಂ ಅದ್ಯಕ್ಷೆ ನೀಲಮ್ಮ ಗಂ. ಗುಂಜಲಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿಜಯಲಕ್ಷ್ಮೀ, ಪ್ರತಿ ಕುಟುಂಬಕ್ಕೆ ಕನಿಷ್ಟ 100 ದಿನ ಕೆಲಸ ಕೊಡಲು ಸರ್ಕಾರ ಆದೇಶವಿದ್ದು ಎಲ್ಲರಿಗೂ ಉದ್ಯೋಗ ಖಾತ್ರಿಯಾಗಿ ದೊರಕಲಿದೆ ಬರುವ ತಿಂಗಳಿನಿಂದ 14 ರೂ. ಹೆಚ್ಚಳ ಮಾಡಲಿದ್ದು ಇದರ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಮುಖಂಡ ಮಂಜುನಾಥ ನಾಯಕ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಕಾರ್ಮಿಕರಿಗೂ ಕೆಲಸ ಲಭಿಸಲಿದ್ದು ಇದನ್ನು ಪಡೆದುಕೊಂಡು ಗುಳೆ ಹೋಗದೇ ಊರಲ್ಲಿಯೇ ಇದ್ದು ಪಂಚಾಯಿತಿಯಿಂದ ಕೆಲಸ ಪಡೆದುಕೊಂಡು ಜೀವನ ನಡೆಸುವಂತೆ ಮನವಿ ಮಾಡಿಕೊಂಡರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ ಆರಬಳ್ಳಿ, ಸದಸ್ಯರಾದ ಸಿದ್ದಮ್ಮ ಶರಣರೆಡ್ಡಿ ಮಾನ್ವಿ, ಶ್ರೀಮತಿ ಮಾನಸ ಮಂಜುನಾಥ ನಾಯಕ ಯಡ್ಡಳ್ಳಿ, ಆನಂದ ರಂಗಣ್ಣೋರ್, ವಿಮಲಾ ಗಂ. ಅರ್ಜುನ, ಅನುರಾಧ ವೀರಭದ್ರಪ್ಪ, ಸಣ್ಣ ಹಣಮಂತ ಚಂದ್ರಾಮ, ಸಲ್ಲು ದಂಡಿನ ಯಡ್ಡಳ್ಳಿ ಸೇರಿದಂತೆ ಇನ್ನಿತರರು ಇದ್ದರು.