ಯಡಿಯೂರಪ್ಪ ಮನೆ ಮೇಲೆ ದಾಳಿ; ಕಾಂಗ್ರೆಸ್ ಕುತಂತ್ರ:ಸಿಎಂ ಬೊಮ್ಮಾಯಿ

ಕಲಬುರಗಿ,ಮಾ 28: ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆದಿದ್ದು ಬಿಜೆಪಿ ಕುತಂತ್ರ ಅಲ್ಲ. ಅದು ಕಾಂಗ್ರೆಸ್ ಕುತಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಬೃಹತ್ ಜವಳಿ ಪಾರ್ಕ ಚಾಲನೆಗೆ ನಗರಕ್ಕೆ ಆಗಮಿಸಿದ ಅವರು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಡಿಯೂರಪ್ಪ ಮನೆ ಮೇಲೆ ಕಲ್ಲು ಹೊಡೆದಿದ್ದು ಬಿಜೆಪಿ ಕುತಂತ್ರ ಅಲ್ಲ. ಅದು ಕಾಂಗ್ರೆಸ್ ಕುತಂತ್ರ .ಅಲ್ಲಿ ಸಿಕ್ಕಿರುವವರು ಕಾಂಗ್ರೆಸ್ ನಾಯಕರು.ಕಾಂಗ್ರೆಸ್ ಅವರನ್ನು ತಪ್ಪು ದಾರಿಗೆ ಎಳೆದಿದೆ.
ರಾತ್ರಿ ಸಭೆ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ .ಡಿ.ಕೆ.ಶಿವಕುಮಾರ್ ಅವರು ಸುಳ್ಳು ಹೇಳೋದನ್ನು ಬಿಡಬೇಕುಎಂದು ಹರಿಹಾಯ್ದರು.
ಚುನಾವಣೆ ಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆÀ ಉತ್ತರ ನೀಡಿದ ಅವರು
ಕಾಂಗ್ರೆಸ್ ಗೆ ಹೊಟ್ಟೆಕಿಚ್ಚು, ಅವರು ಮಾಡದೇ ಇರೋದನ್ನು ನಾವು ಮಾಡಿದ್ದೇವೆ ಎಂದರು.
ಕಾಂಗ್ರೆಸ್ ನಿಂದ ವಲಸೆ ಹೋದ ವರು ಮತ್ತೆ ಕಾಂಗ್ರೆಸ್ ಬರುತ್ತಾರೆ ಎಂಬ ಚಲುವ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಚಲುವ ನಾರಾಯಣ ಸ್ವಾಮಿಯೇ ವಲಸೆ ವ್ಯಕ್ತಿ, ಆತನ ಮಾತು ನಂಬೋಕೆ ಆಗುತ್ತಾ? ಎಂದರು.ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ಯಾರ ಜೊತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಲಂಬಾಣಿ ಜನರನ್ನು ಎಸ್ಸಿ ಪಟ್ಟಿಯಿಂದ ತಗೆಯುತ್ತಾರೆ ಅಂತ ಸುಳ್ಳು ಸಂದೇಶ ರವಾನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.