ಯಡಿಯೂರಪ್ಪ ಕರೋನಾ ಸೋಂಕಿನಿಂದ ಬೇಗ ಗುಣಮುಖರಾಗಲು ವಿಜುಗೌಡ ಪಾಟೀಲರಿಂದ ವಿಶೇಷ ಪೂಜೆ

ವಿಜಯಪುರ, ಎ.20:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೋನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು.
ವಿಜಯಪುರ ನಗರದ ಐತಿಹಾಸಕ ಸುಂದರೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಅಭಿಷೇಕ ನೇರವೇರಿಸಿ ಮಾತನಾಡಿದ ಅವರು ಮಹಾಮರಿ ಕರೋನಾ ಜಗತ್ತನ್ನೆ ತಲ್ಲಣಗೊಳಿಸಿದ್ದು, ಇದೀಗ ರಾಜ್ಯದಲ್ಲಿ ಎರಡನೇ ಅಲೆ ಜೋರಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ನಿಯಂತ್ರಣ ಕಾರ್ಯ ಕೈಗೊಳ್ಳುತ್ತಿದೆ. ಸ್ವತಃ ಸೋಂಕಿಗೆ ಒಳಗಾಗಿದ್ದರೂ ಯಡಿಯೂರಪ್ಪ ಅವರು ಆಡಳಿತ ಯಂತ್ರ ಸರಿದೂಗಿಸಲು ಆಸ್ಪತ್ರೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ದೈನಂದಿನ ಆಗು ಹೋಗುಗಳ ಮೇಲೆ ನಿಗಾ ಇರಿಸಿದ್ದಾರೆ. ಆದಷ್ಟು ಬೇಗ ಅವರ ಆರೋಗ್ಯ ಸುಧಾರಿಸಲಿ. ನಾಡಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಭಗವಂತ ಇನ್ನೂ ಹೆಚ್ಚು ಶಕ್ತಿ ನೀಡಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಈ ಸಂದಂರ್ಭದಲ್ಲಿ ಮುಖಂಡರಾದ ಭೀಮಾಶಂಕರ ಹದನೂರ ಮಂಡಲ ಅಧ್ಯಕ್ಷ ವಿಠ್ಠಲ ಕಿರಸೂರ ಹಾಗೂ ವಿಜಯ ಜೋಶಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.