ಯಡಿಯೂರಪ್ಪ, ಈಶ್ವರಪ್ಪ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎನ್.ರವಿಕುಮಾರ್

ಮಸ್ಕಿ.ಏ.೦೨-ಸಿಎಂ. ಯಡಿಯೂರಪ್ಪ, ಸಚಿವ ಈಶ್ವರಪ್ಪ ನಡುವೆ ಯಾವದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಆಡಳಿತದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಇಬ್ಬರ ಜತೆ ಮಾತು ಕತೆ ನಡೆಸುವ ಮೂಲಕ ಭಿನ್ನ ಭಿಪ್ರಾಯ ಶಮನ ಗೊಳಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಹೇಳಿದರು.
ಇಲ್ಲಿಯ ಬಸವೇಶ್ವರ ನಗರ ಬಳಿಯ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಗುರುವಾರ ಮಾತನಾಡಿದರು ಸಣ್ಣ ಪುಟ್ಟ ವಿಚಾರಗಳನ್ನು ವೈಭವೀಕರಿಸಲಾಗುತ್ತಿದೆ ಬಿಜೆಪಿಯಲ್ಲಿ ಯಾವದೇ ರೀತಿಯ ಗೊಂದಲಗಳಿಲ್ಲ ಉಪ ಚುನಾವಣೆ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು. ಏ.೩ ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಲಿದ್ದಾರೆ ಈ ವೇಳೆ ಬೂತ್ ಅಧ್ಯಕ್ಷರ ಜತೆ ಉಪ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ ಬೂತ್ ಮಟ್ಟಗಳಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಲೀಡ್ ಪಡೆಯಲು ಕಾರ್ಯತಂತ್ರ ರೂಪಿಸಲಿದ್ದಾರೆ.
ಏ. ೧೧, ೧೨ ರಂದು ಸಿಎಂ. ಯಡಿಯೂರಪ್ಪ ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರ ನಡೆಸಲಿದ್ದಾರೆ ದೇವದುರ್ಗ ಶಾಸಕ ಶಿವನಗೌಡ ಆರೋಗ್ಯ ಚೆನ್ನಾಗಿಲ್ಲ ಹೀಗಾಗಿ ಉಪ ಚುನಾವಣೆ ಪ್ರಚಾರ ಸಭೆ ಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಇದಕ್ಕೆ ಬೇರೆ ಅರ್ಥ ಕಲ್ಪಿಸ ಬೇಕಾಗಿಲ್ಲ ಎಂದು ಎನ್. ರವಿ ಕುಮಾರ್ ಸ್ಪಷ್ಟ ಪಡಿಸಿದರು. ಮಸ್ಕಿ ಕ್ಷೇತ್ರದ ಉಪ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಟಿಸಿಎಲ್ ನಿಗಮ ಅಧ್ಯಕ್ಷ ತಮ್ಮೇಗೌಡ, ಕುರಿ,ಉಣ್ಣೆ ನಿಗಮ ಅಧ್ಯಕ್ಷ ಶರಣು ತಳಕೇರಿ, ಪ್ರಾಣೇಶ ದೇಶ ಪಾಂ ಡೆ ,ಬಿಜೆಪಿ ಮಂಡಲ ಅಧ್ಯಕ್ಷ ಶಿವ ಪುತ್ರಪ್ಪ ಅರಳಿ ಹಳ್ಳಿ, ಕಾರ್ಯ ದರ್ಶಿ ಶರಣಯ್ಯ ಸೊಪ್ಪಿ ಇದ್ದರು.