ಯಡಿಯೂರಪ್ಪನವರಿಗೇ ನನ್ನ ಬೆಂಬಲ: ಸೋಮಶೇಖರ ರೆಡ್ಡಿ

ಬಳ್ಳಾರಿ, ಜೂ.08: ನನ್ನ ಬೆಂಬಲ ನೂರಕ್ಕೆ ನೂರರಷ್ಟು ಯಡಿಯೂರಪ್ಪ ಅವರಿಗೆ, ಈ ಅವಧಿ ಮುಗಿಯುವವರೆಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿದ್ರೇ ಒಳ್ಳೆಯದು. ಅವರಿಗೇ ನನ್ನ ಬೆಂಬಲ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರಿಂದು ಸಂಜೆವಾಣಿಯೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕ. ಬಿಜೆಪಿ ಪಕ್ಷವನ್ನು ಕಷ್ಟಪಟ್ಟು ಕೆಳ ಹಂತದಿಂದ ಈ ಹಂತಕ್ಕೆ ತಂದಿದ್ದಾರೆ. ಹಾಗಾಗಿ ಈ ಆಡಳಿತದ ಅವಧಿ ಮುಗಿಯುವ ವರೆಗೆ ಅವರೇ ಮುಂದುವರೆಯಬೇಕು ಎಂಬುದು ನನ್ನ ಅನಿಸಿಕೆ. ಮುಂದೆ ಬೇಕಾದರೆ ಬೇರೆಯವರನ್ನು ನೋಡೋಣ.
ಈ ಕೊರೊನಾ ಸಮಯದಲ್ಲಿ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಈ ಆಟ ಸರಿಯಲ್ಲ. ಇದು ದೊಡ್ಡ ತಪ್ಪಾಗಲಿದೆಂದರು.
ಕೆಲ ಶಾಸಕ, ಸಚಿವರು ದೆಹಲಿಗೆ ಹೋಗಿ ಬರುವ ಬಗ್ಗೆ ಪ್ರತಿಕ್ರಿಯಿಸಿದ ಅವರು. ಇದೆಲ್ಲ ಕಾಮನ್ ಅದಕ್ಕೆ ಹೆಚ್ಚು ಮಗತ್ವ ಕೊಡಬೇಕಿಲ್ಲ ಎಂದರು
ಸಧ್ಯ ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕು. ಅದೆಲ್ಲ ಬಿಟ್ಟು ನಾಯಕತ್ವ ಬದಲಾವಣೆಗಾಗಿ ದೆಹಲಿಗೆ ಹೋಗೋದು ಬರೋದು ತಪ್ಪು ಎಂದರು.