ಕಲಬುರಗಿ,ಜು.31: ಕಲ್ಯಾಣ ಕರ್ನಾಟಕ ಭಾಗ ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ ಕಲಾ ಪ್ರಕಾರಗಳಿಗೆ ಹೆಸರುವಾಸಿಯಾಗಿದ್ದು ಇದೀಗ ದಕ್ಷಿಣ ಕನ್ನಡ ಸಂಘದ ಮೂಲಕ ಯಕ್ಷಗಾನಕ್ಕೆ ಜನಪ್ರೀತಿ ಮತ್ತು ಬೆಂಬಲ ವ್ಯಕ್ತವಾಗುತ್ತಿರುವುದು ಸಂತಸದ ಸಂಗತಿ ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕರಾದ ಉಪವಾಸ ಹೇಳಿದರು.
ದಕ್ಷಿಣ ಕನ್ನಡ ಸಂಘ ಕಲ್ಬುರ್ಗಿ ವಸತಿ ಗೃಹಗಳ ಮಾಲೀಕರ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜುಲೈ 30 ರಂದು ಕಲಬುರ್ಗಿಯ ವೆಂಕಟೇಶ ಯರಗೋಳ ಮಂಗಳಕಾರ್ಯದ ಲ್ಲಿ ಆಯೋಜಿಸಿದ “ಚೈತ್ರ ಕೋಗಿಲೆ” ಯಕ್ಷಗಾನ ಪ್ರದರ್ಶನವನ್ನು ಚೆಂಡೆ.ಬಾರಿಸಿ ಉದ್ಘಾಟಿಸಿ ಮಾತನಾಡುತ್ತ ಗಾನ ಮತ್ತು ನೃತ್ಯ ವೈಭವದ ಯಕ್ಷಗಾನವನ್ನು ಕಲ್ಯಾಣ ನಾಡಿನಲ್ಲಿ ಸಹೃದಯವರಿಗೆ ಉಣ ಬಡಿಸುವ ಸಂಘದ ಕೆಲಸ ಶ್ಲಾಘನೀಯ. ಈ ಭಾಗದಲ್ಲಿ ಭರತನಾಟ್ಯ,.ಭಕ್ತಿ ಸಂಗೀತ, ಹಿಂದುಸ್ತಾನಿ ಸಂಗೀತ ,ಗಝಲ್ ಪ್ರಕಾರಗಳಿಗೆ ಹೆಸರುವಾಸಿಯಾಗಿದ್ದರೂ ಅಪರೂಪವಾದ ಯಕ್ಷಗಾನ ದಂತಹ ಕಲಾಮಾಧ್ಯಮಕ್ಕೆ ಕಲಾ ಸಹೃದಯರ ಕೊರತೆ ಇಲ್ಲ ಎಂಬುವುದು ಇಂದು ಸಾಬೀತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ಸಂಘಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಹೇಶ್ ರಾಮಯ್ಯ ಯರಗೋಳ, ಭಾಗವತರಾದ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ ಅವರನ್ನು ಉದ್ಯಮಿ ಜೀವನ್ ಕುಮಾರ್ ಜತ್ತನ್ ಮೈಸೂರು ಪೇಟ ತೋರಿಸಿ ಶಾಲು ಹಾರ ಹಾಗೂ ಹಣ್ಣು ಹಂಪಲು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿಗಳಾದ ಸತೀಶ್ ವಿ. ಗುತ್ತೇದಾರ್, ರಾಜ್ಯ ಹೋಟೆಲ್ ಅಸೋಸಿಯೇಷನ್ನು ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಶ್ರೀರಾಮ ಮಂಡಳಿ ಆಡಳಿತದ ಸಮಿತಿ ಅಧ್ಯಕ್ಷರಾದ ವಿದ್ಯಾಧರ ಭಟ್ ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ,ನರಸಿಂಹ ಮೆಂಡನ್, ಗಂಗಾಧರ ತಂತ್ರಿ ಹಾಜರಿದ್ದರು. ಕಾರ್ಯದರ್ಶಿ ಪುರಂದರ ಭಟ್ ನಿರೂಪಿಸಿದರು. ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶಿಕ್ಷಕಿ ರೇಣುಕಾ ಶ್ರೀಕಾಂತ್ ಶಿರ್ಲಾಲು ಧನ್ಯವಾದ ಸಲ್ಲಿಸಿದರು.
“ಯಕ್ಷ ರಸಿಕರಿಗೆ ಸಂಭ್ರಮ”
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದ ಕಲಾವಿದರು ಪ್ರಸ್ತುತಪಡಿಸಿದೆ ಚೈತ್ರ ಕೋಗಿಲೆ ಯಕ್ಷಗಾನವನ್ನು ನೋಡಿದ ಕಲರಸಿಕರು ಸಂಭ್ರಮದಿಂದ ಹಿಗ್ಗಿದರು
ಖ್ಯಾತ ಭಾಗವತರಾದ ರಾಘವೇಂದ್ರ ಮಹಿಮೆ ಮತ್ತು ಉಮೇಶ್ ರವರ ನನ್ನ ವೈಭವಕ್ಕೆ ತಲೆ ತೂಗಿಸುವಂತಾಯಿತು. ಉತ್ತಮ ಸಾಮಾಜಿಕ ಕಥನವುಳ್ಳ ಚೈತ್ರ ಕೋಗಿಲೆ ಪ್ರಸಂಗದಲ್ಲಿ ಚಂದನ ಪಾತ್ರನಿರ್ವಹಿಸಿದ ಕೋಡಿ ವಿಶ್ವನಾಥ ಚೈತ್ರ ಪಾತ್ರ ನಿರ್ವಹಿಸಿದ ವಿಶ್ವನಾಥ ಮತ್ತು ನೀತಿನ್ ದುರ್ಮಿಳೆಯಾಗಿ ಹಕ್ಲಾಡಿ ರವೀಂದ್ರ ಶೆಟ್ಟಿ, ಕೋಗಿಲೆಯಾಗಿ ಮಾಧವ ಬಳಿಗಾರ್, ಶ್ರುತಕೀರ್ತಿಯಾಗಿ ಹಾಸ್ಯದಲ್ಲಿ ಮಹಾಬಲೇಶ್ವರ ಕ್ಯಾದಿಗೆ ಕಲಾಭಿಮಾನಿಗಳ ಮನೆಗೆದ್ದರು ಕಿಕ್ಕೇರಿದು ತುಂಬಿದ ಪ್ರೇಕ್ಷಕರ ನಡುವೆ ನಡೆದ ಯಕ್ಷಗಾನ ಪ್ರದರ್ಶನ ಯಶಸ್ವಿಗೊಂಡಿತು.