ಯಕ್ಷಾರಾಧನೆ  ಮನಸ್ಸುಗಳ ಪುಳಕಿತಕ್ಕೆ ಸ್ಪೂರ್ತಿ

ದಾವಣಗೆರೆ.ಜು.೨೬;ಕರ್ನಾಟಕದ ಕರಾವಳಿ ಜಿಲ್ಲೆಗಳ ಐತಿಹಾಸಿಕ ಪರಂಪರೆಯ ಪುರಾತನ ಅಪ್ಪಟ ಕನ್ನಡ ಭಾಷೆಯೊಂದಿಗೆ ವಿಶ್ವದಾದ್ಯಂತ ಅನಾವರಣಗೊಳಿಸಿದ ಆರಾಧನಾ ಕಲೆ ಯಕ್ಷಗಾನ ಶತಶತಮಾನಗಳ ಹಿಂದೆಯೇ ಯಕ್ಷ ತಪಸ್ವಿ ಪಾರ್ಥಿಸುಬ್ಬ ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರು, ಹಿರಿಯ ಯಕ್ಷಗಾನ ಕಲಾವಿದರೂ ಮುನ್ನಡೆಸಿಕೊಂಡು ಈ ದೈವೀಕಲೆ ಪ್ರದರ್ಶನ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲದೇ ಆರಾಧನೆಯೂ ಹೌದು. ಈ ಯಕ್ಷರಾಧನೆ ಮಾನವನ ಜೀವನದ ಮನಸ್ಸುಗಳನ್ನು ಪುಳಕಿತಗೊಳಿಸುವ ಶಕ್ತಿ ಈ ಕಲೆಗಿದೆ. ಕುಣಿತ, ನೃತ್ಯ, ಅಭಿನಯ, ಆಶುಸಂಭಾಷಣೆ, ವೀರಾವೇಶದ ಅರ್ಭಟ, ಸ್ವಯಂ ಪ್ರೇರಿತ ವಾಕ್‌ಚಾತುರ್ಯ, ವೇಷಭೂಷಣ ಹೀಗೆ ನವರಸಗಳ ಎಲ್ಲಾ ಪ್ರಕಾರಗಳ ಮೇಳೈಕೆಯೇ ಕುಳಿತ ಪ್ರೇಕ್ಷಕರನ್ನು ರಂಜಿಸುವುದು ಈ ಕಲೆಯ ವೈಶಿಷ್ಠತೆ. ಕಳೆದ ನಾಲ್ಕು ದಶಕಗಳಿಂದ ಈ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಈ ಅಪರೂಪದ ಯಕ್ಷಗಾನ ಕಲಾಪ್ರಕಾರಗಳನ್ನು ನಿರಂತರವಾದ ಕ್ರಿಯಾಶೀಲತೆಯೊಂದಿಗೆ ಕಠಿಣ ಪರಿಶ್ರಮದ ಈ ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ನಾಡಿನ ಖ್ಯಾತ ಯಕ್ಷಗಾನ ಭಾಗವತರಾದ ಜಿ.ರಾಘವೇಂದ್ರ ಮಯ್ಯಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ವಿಜಯಲಕ್ಷಿö್ಮÃ ರಸ್ತೆಯ, ಚನ್ನಗಿರಿ ರಂಗಪ್ಪ ಗಡಿಯಾರ ಗೋಪುರದ ಹತ್ತಿರವಿರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ನುರಿತ ಹಿರಿಯ ಖ್ಯಾತ ವೃತ್ತಿನಿರತ ಕಲಾವಿದರಿಂದ “ಚಕ್ರ ಚಂಡಿಕೆ” ಕಥಾನಕದ ಯಕ್ಷಗಾನ ಪ್ರದರ್ಶನವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾದ ಬೆಂಗಳೂರಿನ ರವೀಂದ್ರ ಹೆಚ್.ಅರಳಗುಪ್ಪಿ, ಉಡುಪಿ ಜಿಲ್ಲೆಯ ಶ್ರೀ ಬಣ್ಣದ ಸಕ್ಕಟ್ಟು ಶ್ರೀ ಲಕ್ಷಿö್ಮÃ ನಾರಾಯಣಯ್ಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಸಕ್ಕಟ್ಟು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಈ ದೈವೀಕಲೆನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪುರುಷ ಪ್ರಧಾನವಾದ ಈ ಜನಪದ ಕಲೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮುಂಚೂಣಿಯಲ್ಲಿ ಇದ್ದು ರಂಜಿಸುತ್ತಿರುವುದು ಮೆಚ್ಚುತಕ್ಕದ್ದು, ಅದರಲ್ಲೂ ದಾವಣಗೆರೆಯ ಮಹಿಳೆಯರಿಗೆ ಮಕ್ಕಳಿಗೆ ಈ ಕಲೆಗಳ ತರಬೇತಿ ನೀಡಿ ಈ ದೇವನಗರಿಯಲ್ಲಿ ಛಾಪು ಮೂಡಿಸುತ್ತಿರುವ ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಾಧನೆ ಇತರ ಸಂಘಟನೆಗಳಿಗೆ ಮಾದರಿ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.