ಯಕ್ಷಪೀಠಿಕೆ ಸ್ಪರ್ಧೆಯಲ್ಲಿ ಕಲಾಕುಂಚ ಸದಸ್ಯರಿಗೆ ಪ್ರಥಮ ಬಹುಮಾನ

ದಾವಣಗೆರೆ-ಮಾ.31; ಮಂಗಳೂರಿನ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಸಂಘದ ಶತಮಾನೋತ್ಸವ ಅಂಗವಾಗಿ ಇತ್ತಿಚಿಗೆ ನಡೆದ ಯಕ್ಷಪೀಠಿಕೆ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಕೇರಳ ರಾಜ್ಯದ ಮಂಗಲ್ಪಾಡಿಯ ಯಕ್ಷ ಮೌಕ್ತಿಕ ಯಕ್ಷಗಾನ ಮಹಿಳಾ ತಂಡದ ಸದಸ್ಯರು, ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಮಿತಿ ಸದಸ್ಯರಾದ ಯಕ್ಷಗಾನ ತಾಳಮದ್ದೆಯ ಗಂಭೀರವಾದ ಅರ್ಥಪೂರ್ಣ ಅರ್ಥಧಾರಿ ಶ್ರೀಮತಿ ಸರಸ್ವತಿ ಹೊಳ್ಳರವರಿಗೆ ಪ್ರಥಮ ಬಹುಮಾನ, ಇನ್ನೊಬ್ಬ ಯಕ್ಷಗಾನ ತಾಳಮದ್ದಳೆಯ ಪ್ರತಿಭಾವಂತ ಅರ್ಥಧಾರಿ ಶ್ರೀಮತಿ ಶ್ರೀಲತಾ ನಾವಡ ತೃತೀಯ ಬಹುಮಾನ ಪಡೆದಿರುತ್ತಾರೆ.ಮಕ್ಕಳ ವಿಭಾಗದಲ್ಲಿ ಯಕ್ಷಗಾನ ಕಲಾವಿದ ಹರಿಕೀರ್ಥನಾ ಕಾಲಕ್ಷೇಪದ ಬಾಲಪ್ರತಿಭೆ ಕುಮಾರ ಸಾತ್ವಿಕ್ ನಾವಡ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಮಂಗಲ್ಪಾಡಿಯ ಯಕ್ಷ ಮೌಕ್ತಿಕ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರೂ, ಕಲಾಕುಂಚ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ ಆದ ಶ್ರೀಮತಿ ಜಯಲಕ್ಷ್ಮಿ ಕಾರಂತರವರು ತಿಳಿಸಿದ್ದಾರೆ.ನಾಡಿನ ಖ್ಯಾತ ಯಕ್ಷಗಾನ ಭಾಗವತರು, ಸ್ಪಷ್ಟ ಉಚ್ಛಾರಣೆಯ ಪ್ರತಿಭಾವಂತ ಅರ್ಥಧಾರಿಗಳೂ ಆದ ಹರೀಶ್ ಬಳಂತಿ ಮುಗರು ಇವರ ಶಿಷ್ಯರಾದ ಇವರೆಲ್ಲರಿಗೂ ದಾವಣಗೆರೆ ಕಲಾಕುಂಚದ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಕೃತಜ್ಞತೆಯೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.