ಯಕ್ಷಗಾನ ಕಲಾವಿದ ನೇಣು ಬಿಗಿದು ಆತ್ಮಹತ್ಯೆ 

ಮುಡಿಪು, ನ.೧9- ನೇಣು ಬಿಗಿದು ಯಕ್ಷಗಾನ ಕಲಾವಿದರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇರಾ ಗ್ರಾಮದ ಮೂಳೂರಿನಲ್ಲಿ ಶುಕ್ರವಾರ ನಡೆದಿದೆ. 

ಯಕ್ಷಗಾನ ಕಲಾವಿದ ಕೀರ್ತನ್ ಶೆಟ್ಟಿ ವಗೆನಾಡು (38) ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಕ್ಷಗಾನದಲ್ಲಿ ಹಿಮ್ಮೇಳ (ಭಾಗವತ) ಕಲಾವಿದನಾಗಿದ್ದ ಅವರು ಬಪ್ಪನಾಡು ಹಾಗೂ ಇತರ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕೊರೋ‌ನ ಬಳಿಕ ಚಿಕ್ಕಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾಲೆತ್ತೂರಿನಲ್ಲಿ ವಾಸವಾಗಿದ್ದ ಇವರ ಕುಟುಂಬ ಮೂರು ವರ್ಷದಿಂದ ಇರಾ ಗ್ರಾಮದ ಪರಪುವಿನಲ್ಲಿ ವಾಸವಾಗಿದ್ದರು. ವಿವಾಹಿತರಾಗಿದ್ದ ಇವರಿಗೆ ಪತ್ನಿ, ಅವಳಿ ಜವಳಿ ಮಕ್ಕಳು, ತಂದೆ, ತಾಯಿ, ತಮ್ಮ  ಇದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.