
ದಾವಣಗೆರೆ-ಮಾ.13:ಕರ್ನಾಟಕ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತವಾದ ಆರಾಧನಾ ಕಲೆ, ಐತಿಹಾಸಿಕ ಪರಂಪರೆಯ ಪುರಾತನ ಅಪ್ಪಟ ಜನಪದ ಕನ್ನಡ ಭಾಷೆಯನ್ನು ವಿಶ್ವವ್ಯಾಪ್ತಿಯಾಗಿ ವೈಭವೀಕರಿಸಿದ ದೈವೀಕಲಾಪ್ರಕಾರ ಯಕ್ಷಗಾನ ಪ್ರದರ್ಶನ ಸಾವಿರಾರು ವರ್ಷಗಳಿಂದ ರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ಅವಕಾಶವಿದ್ದು ಇತ್ತೀಚಿಗೆ ಕರೋನಾದ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಮಯ ಮಿತಿ ಇಟ್ಟಿದ್ದು ವಿಷಾದದ ಸಂಗತಿ ಎಂದು ದಾವಣಗೆರೆಯ ಯಕ್ಷರಂಗ ಸಂಸ್ಥೆಯ ಸಂಸ್ಥಾಪಕರೂ, ಹವ್ಯಾಸಿ ಕಲಾವಿದರೂ ಆದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ನೋವನ್ನು ಹಂಚಿಕೊAಡಿದ್ದಾರೆ.ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಅಕಾಡೆಮಿ ಎಲ್ಲರೂ ಸೇರಿ ಮುಂದಿನ ದಿನಮಾನಗಳಲ್ಲಿ ಎಲ್ಲಾ ದೇವಸ್ಥಾನಗಳ ಕೃಪಾಪೋಷಿತ ಅನುಗ್ರಹದಿಂದ ನಡೆಯುತ್ತಿರುವ ಯಕ್ಷಗಾನ ಪ್ರದರ್ಶನಕ್ಕೆ ಕಾಲಾವಕಾಶ ನೀಡಬೇಕಾಗಿ ದಾವಣಗೆರೆ ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ, ಖಜಾಂಚಿ ನೀಲಾವರ ಭಾಸ್ಕರ ನಾಯಕ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಪದಾಧಿಕಾರಿಗಳು ಹಕ್ಕೊತ್ತಾಯ ಮಾಡಿದ್ದಾರೆ.