ಗುಳೇದಗುಡ್ಡ ಜು.5- ನಮ್ಮ ಸಾಮಥ್ರ್ಯ ನಾವು ಅರಿತು ಓದಿ ನಮ್ಮ ಜೀವನದ ಗುರಿ ತಲುಪಬೇಕು, ವ್ಯಕ್ತಿತ್ವ ವಿಕಾಸಕ್ಕೆ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ಪ್ರೊಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್‍ನ ಎಸ್.ಎಮ್.ಭಂಡಾರಿ,ಕಲಾ,ಆರ್.ಆರ್.ಭಂಡಾರಿ ವಾಣಿಜ್ಯ,ಎಸ್.ಕೆ.ರಾಠಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಕೀಳಾಗಿ ಬಳಸದೇ ಅದೊಂದು ಜ್ಞಾನದ ಸಾಧನವಾಗಿ ಬಳಸಬೇಕು, ಶಿಕ್ಷಕರ ಮಾರ್ಗದರ್ಶನದಲ್ಲಿ ಇಷ್ಟಪಟ್ಟು ಓದಿ ಜ್ಞಾನ ಸಂಪಾದನೆ ಮಾಡಬೇಕು ಎಂದು ಹೇಳಿದರು.
ಪಿಇಟಿ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಸಂಸ್ಥೆ ಬೆಳೆದು ಬಂದ ಬಗೆಯನ್ನು ವಿವರಿಸಿ ಪ್ರಸ್ತುತ ನಮ್ಮ ಸಂಸ್ಥೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದು, ಎಲ್‍ಕೆಜಿಯಿಂದ ಪಿಜಿಯವರೆಗೆ ಕೋರ್ಸಗಳನ್ನು ಆರಂಭಿಸಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಪಿಇಟಿ ಚೇರ್ಮನ ಕಮಲ್‍ಕಿಶೋರಜೀ ಆರ್.ಭಂಡಾರಿ ಅವರು ಮಾತನಾಡಿ, ಸಂಸ್ಥೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ. ಅವುಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಮುಂದೆ ಬರಬೇಕೆಂದರು. ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಬಿ.ಬರಗುಂಡಿ ವಿಶೇಷ ಉಪನ್ಯಾಸ ನೀಡಿದರು.
ಪಪೂ ವಿಭಾಗದ ಚೇರ್ಮನ ಸಂಗಣ್ಣ ಎಸ್.ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಗುರು ಪೂರ್ಣಿಮೆ ಇಂತಹ ದಿನದಲ್ಲಿ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಮೆಡಂ ಅವರು ಬಂದು ಪ್ರೇರಣಾತ್ಮಕ ಮಾತುಗಳನ್ನು ಆಡಿದ್ದಾರೆ ಅವರು ಹೇಳಿದ ಎಲ್ಲ ಆಲೋಚನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪಪೂ ವಿಭಾಗದ ಪ್ರಾಚಾರ್ಯೆ ಅರ್ಚನಾ ದೊಡಮನಿ ಪ್ರಾಸ್ಥಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ನಂತರ 2022-23 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರಗಳೊಂದಿಗೆ ಗೌರವಿಸಿದರು. ಈ ಹಿಂದೆ ಇದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಪ್ರೊ.ಸಿದ್ದಲಿಂಗಪ್ಪ ಬರಗುಂಡಿಯವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆ ನಿರ್ದೇಶಕರಾದ ವೀರಣ್ಣ ಕುರಹಟ್ಟಿ. ಪಪೂ ವಿಭಾಗದ ಸದಸ್ಯರಾದ ಪಿ.ಎಮ್.ಝಂವಾರ, ಎಲ್.ಆರ್.ಕಾಬ್ರಾ, ಬಿ.ಎಮ್.ತಾಪಡಿಯಾ, ಎಸ್.ಎನ್.ಕರಣಿ, ಪದವಿ ಕಾಲೇಜು ಪ್ರಾಚಾರ್ಯ ಡಾ.ಎನ್.ವಾಯ್.ಬಡನ್ನವರ, ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.