ಯಕ್ಕುಂಡಿ ಗ್ರಾಮ ಸಭೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಡಿ20: ಯಕ್ಕುಂಡಿ ಗ್ರಾಮ ಪಂಚಾಯತದಲ್ಲಿ ಸನ್ 2023 – 2024 ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಜರುಗಿತು.
ಗ್ರಾಮ ಪಂಚಾಯತ ಅದ್ಯಕ್ಷರಾದ ಪೈರೋಜಾ ಬಾ ಬಾರಿಗಿಡದ ಸಭೆಯ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿ ಸರಕಾರದ ಎಲ್ಲ ಯೊಜನೆಗಳನ್ನು ಮತ್ತು ಗ್ರಾಮಸ್ಥರಿಗೆ ಸಿಗಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕ ಪ್ರಯತ್ನದಿಂದ ಎಲ್ಲ ಜನರಿಗೆ ದೊರಕಿಸಿಕೂಡುವುದಾಗಿ ತಿಳಿಸಿದರು.
ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ವಾಯ್ ಪಿ ಬೋಳಶೆಟ್ಟಿ ಗ್ರಾಮಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದ ವಿವಿದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು. ಮತ್ತು ಸರಕಾರದಿಂದ ಸಿಗುವ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೂಳ್ಳಲು ಕರೆನೀಡಿದರು.
ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಗ್ರಾ ಪಂ ಸದಸ್ಯರುಗಳಾದ ಹಸನಸಾಬ ಬಾರಿಗಿಡದ, ಶಿವಾನಂದ ಕಂಬಿಯವರ, ಕೃಷ್ಣ ಕಂಬಾರ, ಮಂಜುನಾಥ ಪಮ್ಮಾರ, ಸುರೇಶ ಲಮಾಣಿ, ತಾಲಿಬ ಮುಜಾವರ, ಪ್ರಕಾಶ ಪಾಶ್ಚಾಪೂರ, ಹಣಮಂತ ರೂಢನ್ನವರ, ಬಾಷಾ ದೊಡಮನಿ, ಶಾಹೇಬಿ ದಿನ್ನಿಮನಿ, ಭೀಮವ್ವ ಮಾದರ, ಅನಸೂಯಾ ನಾಯ್ಕ, ಅನಸೂಯಾ ಲಮಾಣಿ, ಈರಪ್ಪ ಮಾದರ, ಮತ್ತು ವಿವಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಗಳ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ನಾಲ್ಕು ಗ್ರಾಮಗಳ ಗ್ರಾಮಸ್ಥರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಸರ್ವ ಸದಸ್ಯರು, ಪಂಚಾಯತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು, ಲೆಕ್ಕಸಹಾಯಕ ಲಕ್ಷ್ಮಣ ಬಟಕುರ್ಕಿ ಸ್ವಾಗತಿಸಿದರು, ಕಾರ್ಯದರ್ಶಿಗಳಾದ ನಾಗಪ್ಪ ಕೊಡ್ಲಿ ವಂದಿಸಿದರು.