ಯಕ್ಕುಂಡಿಯಲ್ಲಿ ಶಾಂತಿ ಸಭೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಜು23: ಸಮಿಪದ ಯಕುಂಡಿ ಯಕ್ಕುಂಡಿ,ಧೂಪದಾಳ,ಕಾರ್ಲಕಟ್ಟಿ ಗ್ರಾಮಗಳಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಮೊಹರಂ ಹಬ್ಬದ ನಿಮಿತ್ಯವಾಗಿ ಸವದತ್ತಿಯ ಪೋಲಿಸ ಇಲಾಖೆಯ ವತಿಯಿಂದ ಶಾಂತಿ ಪಾಲನಾ ಸಭೆ ಯಕ್ಕುಂಡಿಯ ಗ್ರಾಮ ಪಂಚಾಯತ ಸಬಾ ಭವನದಲ್ಲಿ ಜರುಗಿತು.
ರಾಮದುರ್ಗ ಠಾಣೆಯ ಪೊಲೀಸ ಇಲಾಖೆಯ ಡಿ.ವಾಯ್.ಎಸ್.ಪಿ ರಾಮನಗೌಡ ಹಟ್ಟಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ ಯಕ್ಕುಂಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾಗಿದ್ದು ಮೊಹರಂ ಹಬ್ಬವನ್ನು ಶಾಂತಿಯುತವಾಗಿ ನಡೆಸಬೇಕೆಂದು ಗ್ರಾಮಸ್ಥರಿಗೆ ತೀಳಿಸಿದರು. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಹಬ್ಬದ ವಾತಾವರಣದಲ್ಲಿ ಯಾರಾದರು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತ ಕೆಲಸ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಕಿವಿಮಾತನ್ನು ಹೇಳಿದರು. ಗ್ರಾಮಸ್ಥರು ಶಾಂತಿಯುತವಾಗಿ ಜೀವನ ನಡೆಸಿದರೆ ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತೊಮ್ಮೆ ಹಿರಿಯರಲ್ಲಿ ವಿನಂತಿಸಿದರು.
ಸಿ ಪಿ ಆಯ್ ಜೆ. ಕರುಣೇಶಗೌಡ ಮಾತನಾಡಿ ಯಕ್ಕುಂಡಿ ಗ್ರಾಮವು ರಾಜ್ಯದಲ್ಲಿಯೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಮಾದರಿ ಗ್ರಾಮವಾಗಿದ್ದು ಇಲ್ಲಿ ಹಿಂದೂ-ಮುಸ್ಲಿಂ ಬಾಂದವರು ಜಾತಿ ಭೇದ ಮರೆತು ಅಣ್ಣತಮ್ಮಂದಿರರ ಹಾಗೆ ಬದುಕುತ್ತಾ ಇರುವುದು ಭಾವೈಕ್ಯತೆಗೆ ಪ್ರತೀಕವಾಗಿದೆ. ಆದ್ದರಿಂದ ತಾವೆಲ್ಲರು ಕಾನೂನನ್ನು ಪಾಲನೆ ಮಾಡಬೇಕೆಂದರು.
ಪಿಡಿಒ ಎನ್. ಶ್ರೀಶೈಲಗೌಡ, ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ, ನಿಜಾಮುದ್ದಿನ ಬಾರಿಗಿಡದ, ವಿನೋದರಾವ ದೇಸಾಯಿ, ನಾಗಪ್ಪ ಹಿಟ್ಟಣಗಿ, ಇಸ್ಮಾಯಿಲ್ ಮುಜಾವರ, ಗ್ರಾ ಪಂ ಸದಸ್ಯರಾದ ಹಸನಸಾಬ ಬಾರಿಗಿಡದ, ಶಿವಾನಂದ ಕಂಬಿಯವರ, ಶೇಖವ್ವ ತಿಮ್ಮೇಶಿ, ಸುರೇಶ ಲಮಾಣಿ, ಹಣಮಂತ ರೂಢನ್ನವರ,
ಪ್ರಕಾಶ ಪಾಶ್ಚಾಪೂರ, ಈರಪ್ಪ ಮಾದರ, ಇಮಾಮಸಾಬ ಇಮ್ಮನ್ನವರ, ಹುಸೇನಸಾಬ ಮುಜಾವರ, ಪೋಲಿಸ ಇಲಾಖೆಯ ಸಿಬ್ಬಂದಿ ನಾಗೇಶ ಕರಡಿ,
ಶಿವಾನಂದ ಕೊರಕೊಪ್ಪ ಮತ್ತು ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.