ಯಂತ್ರೋಪಕರಣ ಶಿಕ್ಷಣ ಪಡೆದವರಿಗೆ ಬೇಡಿಕೆ

ಹರಿಹರ.ಮೇ.೧೮; ಯಂತ್ರೋಪಕರಣ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಎಲ್ಲೆಡೆ ಬೇಡಿಕೆ ಇದ್ದು, ಈ ತಂತ್ರಜ್ಞಾನದ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಅಮೇರಿಕಾದ ಮಿಚಿಗನ್ ರಾಜ್ಯದ ಟ್ರಾಯ್ ನಗರದ ಅಕ್ಟಲೆಂಟ್ ರ ಕಂಪನಿಯ ತಾಂತ್ರಿಕ ವ್ಯವಸ್ಥಾಪಕ ವಿನಯ್ ಕುಮಾರ್ ಕೊಟಗಿ ಹೇಳಿದರು.ಇಲ್ಲಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ  ಆಯೋಜಿಸಿದ್ದ  ಸಂವಾದ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ  42 ಸಾವಿರ ಯಂತ್ರೋಪರಕಣ ತಂತ್ರಜ್ಞರು ಬೇಕಾಗಿದ್ದಾರೆ. ಜಿಟಿಟಿಸಿ, ಎನ್‌ಟಿಟಿಎಫ್ ನಂತಹ ತರಬೇತಿ ಕೇಂದ್ರಗಳಿಂದ ರ‍್ಷಕ್ಕೆ 15 ಸಾವಿರ ತಂತ್ರಜ್ಞರು ಮಾತ್ರ ಲಭ್ಯವಾಗುತ್ತಿದ್ದಾರೆ. ಇನ್ನೂ 27 ಸಾವಿರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದರು.ಕಾರ್ಮಿಕನ ಪುತ್ರನಾಗಿ ಹರಿಹರದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು, ಹುಬ್ಬಳ್ಳಿಯ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೊಮಾ, ನಂತರ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೆ ಬೆಂಗಳೂರಿನ ಸಂಜೆ ಕಾಲೇಜಿನಲ್ಲಿ ಇಂಜಿಯರಿಂಗ್ ಪದವಿ ಪಡೆದೆನು. ಈಗ ಅಮೇರಿಕಾದಲ್ಲಿ ಉತ್ತಮ ಉದ್ಯೋಗದಲ್ಲಿದ್ದು, ಕುಟುಂಬದೊಂದಿಗೆ ವಾಸವಿದ್ದೇನೆ ಎಂದರು.ಕಡಿಮೆ ಖರ್ಚಿನಲ್ಲಿ ಉದ್ಯೋಗಾಧಾರಿತ ಕೋರ್ಸ್ ಕಲಿಯಲು ಜಿಟಿಟಿಸಿ ಸೂಕ್ತ ಆಯ್ಕೆಯಾಗಿದೆ. ಇಲ್ಲಿ ಕಲಿಯುವ ಅವಕಾಶ ಸಿಕ್ಕವರು ಭಾಗ್ಯವಂತರು. ತಂದೆ, ಅಣ್ಣ, ಬಂಧುಗಳ ಒತ್ತಡಕ್ಕೆ ಎಂದು ಬೇಡದ ಮನಸ್ಸಿನಿಂದ ಕಲಿಕೆ ಬೇಡ, ತನ್ಮಯತೆಯಿಂದ ಇಷ್ಟಪಟ್ಟು ಕಲಿತರೆ ನಿಮ್ಮನ್ನು ಜಾಗತಿಕ ಮಟ್ಟದ ತಂತ್ರಜ್ಞನ ಸ್ಥಾನ ನೀಡುವ ಶಕ್ತಿ ಈ ಕರ‍್ಸ್ಗಿದೆ ಎಂದು ವಿದ್ಯರ‍್ಥಿಗಳಿಗೆ ಪ್ರೇರೇಪಿಸಿದರು.ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಎಸ್.ಲಕ್ಷö್ಮಣ್ ನಾಯ್ಕ್ ಮಾತನಾಡಿ, ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಜಿಟಿಟಿಸಿ ಡಿಪ್ಲೊಮಾ ಜಾಗತಿಕ ಮನ್ನಣೆ ಇದೆ. ಈ ಕೋರ್ಸ್ ನಂತರ ಬಿ.ಇ. ಪದವಿಗೆ ಲ್ಯಾಟರಲ್ ಎಂಟ್ರಿ ಪಡೆಯಲು ಅವಕಾಶವಿದೆ. ಶೇ.100 ರಷ್ಟು ಉದ್ಯೋಗ ಸಿಗುತ್ತದೆ ಎಂದರು.ವಿನಯ್ ಕುಮಾರ್ ಕೊಟಗಿ ಇವರ ತಂದೆ ಎಚ್.ಕೆ.ಕೊಟ್ರಪ್ಪ ಮಾತನಾಡಿ, ಬಡ, ಗ್ರಾಮೀಣ ಭಾಗದ ಮಕ್ಕಳು ಜಾಗತಿಕ ಮಟ್ಟದ ಹಾಗೂ ಕೈ ತುಂಬ ಸಂಬಳದ ಉದ್ಯೋಗ ಪಡೆಯಲು ಜಿಟಿಟಿಸಿ ಕರ‍್ಸ್ ಸೂಕ್ತವಾಗಿದೆ. ಜಿಟಿಟಿಸಿ ಕಲಿತ ನನ್ನ ಮಗನ ಮೂಲಕ ನಿವೃತ್ತ ಕರ‍್ಮಿಕನಾದ ನಾನು ಅಮೇರಿಕಾ ಪ್ರವಾಸ ಮಾಡಿ ಬಂದೆ ಎಂದರು.ವಿದ್ಯರ‍್ಥಿಗಳು ಕೇಳಿದ ವಿವಿಧ ಪ್ರಶ್ನೆ, ಸಂದೇಹಗಳಿಗೆ ವಿನಯ್ ಕುಮಾರ್ ಕೊಟಗಿ ಉತ್ತರ ನೀಡಿದರು. ಸಂಸ್ಥೆಯ ಅಧ್ಯಾಪಕರಾದ ಗಣೇಶ್ ನಾಯ್ಕ್, ಚರಣ್‌ರಾಜ್, ಗುರು ಶಂಕರ್, ಶಿವಕುಮಾರ್ ಕೆ.ಎಸ್. ಇದ್ದರು.