ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ


ದಾವಣಗೆರೆ ಜು.21;ವಿಧಾನ ಪರಿಷತ್ ಶಾಸಕರಾದ ಆರ್ ಪ್ರಸನ್ನ ಕುಮಾರ್ ರವರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಆಯ್ಕೆಯಾದ 03 ಜನ ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ (ರೆಟ್ರೋಫಿಟ್‍ಮೆಂಟ್ ಸಹಿತ)ಗಳನ್ನು ಹೊನ್ನಾಳಿ  ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಜೆ. ಶಾಂತನಗೌಡ ಇವರ ಸಮಕ್ಷಮದಲ್ಲಿ ಜು.19 ರಂದು ವಿತರಿಸಿದರು. ಈ  ವೇಳೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾ ಡಾ|| ಕೆ.ಕೆ. ಪ್ರಕಾಶ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು