ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ವಾರ್ಷಿಕೋತ್ಸವ ಸಂಭ್ರಮ

ಕೋಲಾರ,ಸೆ.೨೪: ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ತನ್ನ ಮೊದಲನೇ ವಾರ್ಷಿಕೋತ್ಸವವನ್ನು ಇಂದು ಕೊಂಡರಾಜೇನಹಳ್ಳಿ ಗ್ರಾಮ ಪಂಚಾಯಿತಿಯ ಖಾದ್ರಿಪುರ ಗ್ರಾಮದಲ್ಲಿ ಆಚರಿಸಲಾಯಿತು. ಈ ವೇದಿಕೆಯನ್ನು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿಯಾಗಿ ಮಾಡಲು ಮಕ್ಕಳಿಂದ ಉದ್ಘಾಟನೆ ಮಾಡಲಾಯಿತು.
ಸಂಸ್ಥೆ ಅಧ್ಯಕ್ಷರಾದ ನಾಗರಾಜ್ ಮಾತಾಡಿ ಸಂಸ್ಥೆಯು ಮುಖ್ಯವಾಗಿ ಮಕ್ಕಳ ಮತ್ತು ಯುವಜನರ ಸಮಗ್ರ ಸುಸ್ಥಿರ ಅಭಿವೃದ್ಧಿಗಾಗಿ ಮಕ್ಕಳ ಸ್ನೇಹಿ ಪಂಚಾಯತಿ ಮಾಡುವ ಉದ್ದೇಶದಿಂದ ಸಂಸ್ಥೆ ಪ್ರಾರಂಭದಿಂದ ಇದುವರಗೂ ಸುಮಾರು ೨೦ರಷ್ಟು ಕಾರ್ಯಕ್ರಮ ಮಾಡಿದ್ದು ಮಕ್ಕಳ, ಯುವಜನರ, ರೈತರ, ಮಹಿಳೆಯರ ಮತ್ತು ಗ್ರಾಮ ಪಂಚಾಯತಿ ಕ್ಲಬ್‌ಗಳನ್ನು ಮಾಡಿ ಅವರಿಗೆ ಮಕ್ಕಳ ಹಕ್ಕುಗಳು, ಯುವಜನರ ಮತ್ತು ಮಹಿಳೆಯರ ಸಬಲೀಕರಣ ಮತ್ತು ರೈತರಿಗೆ ಆಸಕ್ತಿ ಗುಂಪು ರಚಿಸಿ ಅವರಿಗೆ ಸ್ವಾವಲಂಬನೆಯ ಬದಕುಗಳನ್ನು ಕಟ್ಟಿಕೊಂಡು ಮಕ್ಕಳಿಗೆ ಸ್ನೇಹಿ ಪೊ?ಷಕರಾಗಲು ಉತ್ತೇಜನ ನೀಡುತ್ತಾ ಸಂಘಟಿಸುತ್ತಾ ಬರುತ್ತಿದ್ದೇವೆ.
ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಅರಿವು ಮೂಡಿಸುತ್ತಾ ಅರಹಳ್ಳಿ, ಊರಗಲಿ ಮತ್ತು ಕೊಂಡರಾಜೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯನಿರ್ವಾಹಿಸಿತ್ತಾ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಳಿಗೆ ಪೂರಕವಾಗಿ ಸುಮಾರು ೫೦೦ರಷ್ಟು ಪಲಾನುಭಗಳ ಜೊತೆಗೆ ಸಂಸ್ಥೆಯು ಸೇರಿ ಯಶಸ್ವಿಯಾಗಿ ಕಾರ್ಯನಿರ್ವಾಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಸೆ, ಅಸಂಘಟಿತ ಕಾರ್ಮಿಕ ಮತ್ತು ಭಿದಿ ಬದಿಯಾ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮತ್ತು ಮಹಿಳೆಯರು ಈ ವಾರ್ಷಿಕೋತ್ಸವಕ್ಕೆ ಸ್ವಇಚ್ಛೆಯಿಂದ ಬಂದು ಸಂಸ್ಥೆಗೆ ಭಾಗಿದಾರರಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟಿದು ಖುಷಿ ತಂದಿದೆ ಎಂದು ಅಭಿನಂದನೆಗಳು ತಿಳಿಸಿ ಮಕ್ಕಳಿಗೆ ಪುಡ್ ಕಿಡ್ ವಿತರಿಸಿ ಮಕ್ಕಳ ಸ್ನೇಹಿ ಪಂಚಾಯತಿ ಮಾಡಲು ತಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಹೂಹಳ್ಳಿ ನಾಗರಾಜ್, ಅರಿಫ್ ಪಾಷ, ಶಂಕರಣ್ಣ, ಭವ್ಯ, ಮುನಿಯಮ್ಮ, ಇರ್ಫಾನ್, ಉದಯ, ಶೇಮ್ಸ್, ಶ್ರೀನಾಥ್, ದೀಪಾ ಊರಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಮತ್ತು ಸಂಘಟಕರು ಭಾಗವಹಿಸಿದರು.