ಯಂಕಂಚಿ ಬಳಿ ಅಪಘಾತ: ಬೈಕ್‍ಸವಾರ ಸಾವು

ವಿಜಯಪುರ ಮಾ 26: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ
ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ-ಮನ್ನಾಪುರ ಗ್ರಾಮ ಮಧ್ಯದ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವನನ್ನು ರಮೇಶ ಮಾಳಪ್ಪ ಮಾದರ (35) ಎಂದು ಗುರುತಿಸಲಾಗಿದೆ.
ರಮೇಶ ಮಾದರ ಬೈಕ್‍ನಲ್ಲಿ ತೆರಳುತ್ತಿದ್ದಾಗ, ಅಪಘಾತ ಸಂಭವಿಸಿದ್ದು, ಈ ವೇಳೆ ಮಾಳಪ್ಪ ನಾಗಪ್ಪ ತಳವಾರ, ಮಲ್ಲಪ್ಪ ಗೌಡಪ್ಪ ಗಾನೂರು, ದಾದು ಚೌವ್ಹಾಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಸಿಂದಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.