ಮ.ಮ.ಹಳ್ಳಿ ಬಿಜೆಪಿ ಮಂಡಲ ಮಹಾ ಶಕ್ತಿ ಕೇಂದ್ರಕ್ಕೆ ಅಧ್ಯಕ್ಷರ ಆಯ್ಕೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.07:   ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿ.ಜೆ.ಪಿ. ಮಂಡಲದ ಮರಿಯಮ್ಮನಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ಇ. ಶ್ರವಣಕುಮಾರ್ ರನ್ನು ನೇಮಿಸಿ, ಮಂಡಲ ಅಧ್ಯಕ್ಷ ವೀರೇಶ್ವರಸ್ವಾಮಿ, ಸಂಸದ ವೈ.ದೇವೇಂದ್ರಪ್ಪ ನೇಮಕ ಪತ್ರ ವಿತರಿಸಿದರು.
ಅವರು ಆದೇಶ ಪತ್ರದಲ್ಲಿ  ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬಲಪಡಿಸಬೇಕು ಹಾಗೂ ಮುಂಬರುವ ಎಲ್ಲಾ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಹೊಣೆಗಾರಿಕೆ ನಿಮ್ಮದು ಎಂದು ಮಂಡಲ ಅಧ್ಯಕ್ಷರು ತಿಳಿಸಿದರು. ನಂತರ ಪಟ್ಟಣದ ಲಲಿತಮ್ಮ ಹೂಗಾರ್ ರಿಗೂ ಮಹಾಶಕ್ತಿ ಕೇಂದ್ರದ ಮಹಿಳಾ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಎಸ್.ಕೃಷ್ಣನಾಯ್ಕ, ಬಿಜೆಪಿ ಪರಾಜಿತ ಅಭ್ಯರ್ಥಿ ಬಲ್ಲಾ ಹುಣಿಸಿ ರಾಮಣ್ಣ, ಮುಖಂಡರಾದ ತಳವಾರ ದೊಡ್ಡ ರಾಮಣ್ಣ, ಬದ್ರಿನಾಥ ಶೆಟ್ಟಿ, ಮಂಡಲ ಎಸ್ಟಿ ಮೋರ್ಚ ಅಧ್ಯಕ್ಷ ಹೆಚ್.ಬಿ.ಕೃಷ್ಣ, ಎಸ್ಸಿ ಮೋರ್ಚ ಅಧ್ಯಕ್ಷ ರವಿಕಿರಣ್, ಚಿಲಕನಹಟ್ಟಿ ಅಂಜಿನಪ್ಪ ಹಾಗೂ ಇತರರು ಇದ್ದರು.