ಮ.ಮ.ಹಳ್ಳಿಯಲ್ಲಿ ಸೆ.9ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಸಂಜೆವಾಣಿ ವಾರ್ತೆ,ಮರಿಯಮ್ಮನಹಳ್ಳಿ, ಆ.21:  ಪಟ್ಟಣದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಎಲ್ ಭೀಮನಾಯ್ಕ್ ರಿಗೆ ಮರಿಯಮ್ಮನಹಳ್ಳಿಯ ನಾಣಿಕೇರಿ ಆಂಜನೆಯ ಸ್ವಾಮಿ ಮಳಿಗೆ ವರ್ತಕರ ಸಂಘ ಹಾಗೂ ಊರಿನ ದೈವಸ್ಥರು ಸೇರಿ ಆತ್ಮೀಯವಾಗಿ ಗೌರವಿಸಿದರು.ಮರಿಯಮ್ಮನಹಳ್ಳಿ ಪಟ್ಟಣದ ಆರಾಧ್ಯ ದೈವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ನಾಣಿಕೇರಿ ಆಂಜನೆಯ ಸ್ವಾಮಿ ಮಳಿಗೆ ವರ್ತಕರ ಸಂಘ ಹಾಗೂ ಊರಿನ ದೈವಸ್ಥರು ಕಳೆದ 27 ಅಮಾವಾಸ್ಯೆಗಳಿಂದ ಸಂಘದ ಎಲ್ಲಾ ಪದಾಧಿಕಾರಿಗಳು ಅನ್ನ ದಾಸೋಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿದ್ದು, ಮುಂದಿನ ತಿಂಗಳ ಸೆ.09ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮುಕುಂದ ಪತ್ರಿಕೆಗೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ವರ್ತಕರ ಸಂಘದ ಈರಣ್ಣ, ಸಂತೋಷ್ ಚಂದುಕರ, ಮೌನೇಶ್, ಈ.ಅಂಬಣ್ಣ, ಬ್ರಹ್ಮಾನಂದಾಚಾರಿ, ಅರ್ಚಕರಾದ ಪೂಜಾರ್ ರಾಮಣ್ಣ, ಸುಬ್ಬಣ್ಣ ಹಾಗೂ ಇತರರು ಇದ್ದರು.
 
One attachment • Scanned by Gmail