ಮ.ಮ.ಬೆಟ್ಟ ವನ್ಯಜೀವಿ ಧಾಮದಲ್ಲಿ ಟೈಗರ್ ಪ್ರಾಜೆಕ್ಟ್ ಬೇಕಾಗಿಲ್ಲ

ಹನೂರು: ಆ.03:- ತಾಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯಜೀವಿ ಧಾಮ ವಲಯದಲ್ಲಿ ಹುಲಿ ಸಂರಕ್ಷಣಾ ಪ್ರದೇಶ ಘೋಷಣೆಗೆ ಅರಣ್ಯ ಇಲಾಖೆ ಸಿದ್ಧತೆ ನೆಡೆಯಿಸಿದೆ ಆದರೆ ಇಲ್ಲಿನ ಸ್ಥಳೀಯ ಜನರ ಹಿತ ದೃಷ್ಟಿಯಿಂದ ಟೈಗರ್ ಪ್ರಾಜೆಟ್ ಅನ್ನು ತಡೆಯಿಡಲಾಗುವುದು. ಹುಲಿ ಸಂರಕ್ಷಿತಾರಣ್ಯ ಪ್ರದೇಶವಾದರೆ ಜನರಿಗೆ ಅಡಚಣೆ ಎದುರಾಗಲಿರುವ ಯೋಜನೆ ಟೈಗರ್ ಪ್ರಾಜೆಕ್ಟ್ ಬೇಕಾಗಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಹನೂರು ತಾಲೂಕಿನ ಪೆÇನ್ನಾಚಿ ಗ್ರಾಮದಲ್ಲಿ ಆಲಂಬಾಡಿ ಮಠದ ಕಟ್ಟಡ ಭೂಮಿ ಪೂಜೆ , ಬಾಲಕರ ವಸತಿನಿಲಯ ಉದ್ಘಾಟನೆ ಹಾಗೂ ಸಾಲೂರು ಮಠದ ಮಟ್ಟದ ಗುರುಸ್ವಾಮಿ ಅವರ ಗುರುವಂದನಾ ಮಹೋತ್ಸವದಲ್ಲಿ ಮಾತನಾಡಿ,
ಮಲೆ ಮಹದೇಶ್ವರಬೆಟ್ಟ ಭಾಗದಲ್ಲಿ ಬಹುತೇಕ ಹಳ್ಳಿಗಳು ಕಾಡಂಚಿನಲ್ಲಿದೆ. ಈ ಭಾಗದಲ್ಲಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಜನರ ಜೀವನ ಹಿತ ದೃಷ್ಟಿಯಿಂದ ಈ ಪ್ರಜೆಕ್ಸ್ಟ್ ಆಗಲು ಸೂಕ್ತ ಅಲ್ಲ ಎಂದರು.
ಮಹಾದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶ್ರೀ ಸಾಲೂರು ಮಠವು ನಿರಂತರ ದಾಸೋಹ ಮಾಡುವ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ. ಅರಣ್ಯದಂಚಿನ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಯೋಜನೆಯಡಿ 1ಕೋಟಿ ರೂ. ವೆಚ್ಚದಲ್ಲಿ ಬಿದಿರು ಯೋಜನೆ, ಹಾಲು ಉತ್ಪಾದನೆ ಹಾಗೂ ಜೇನು ಸಾಗಾಣಿಕೆಯ ತರಬೇತಿ ಕಟ್ಟಡ ನಿರ್ಮಾಣ ಮಾಡಲಾಗುವುದು. 85 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಪುಟದಲ್ಲಿ ಚರ್ಚೆ ಆಗಿದ್ದು ವಿದ್ಯುತ್, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ 580 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಕೆರೆಗೆ ನೀರು ತುಂಬಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಿಎಂ ಅವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸುತ್ತೂರು ಶ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಮುಖ್ಯಮಂತ್ರಿ ಸಲಹೆಗಾರರು (ಇ- ಆಡಳಿತ) ಬೆಳ್ಳೂರು ಸುದರ್ಶನ್ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತ ಮಲ್ಲಿಕಾರ್ಜುನಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನಬಸವಸ್ವಾಮೀಜಿ, ಕುಂದೂರು ಮಠದ ಡಾ.ಶರತ್ ಚಂದ್ರಸ್ವಾಮೀಜಿ, ಶಾಸಕ ಆರ್.ನರೇಂದ್ರ, ಮಾಜಿ ಶಾಸಕರಾದ ಪರಿಮಳನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ಶ್ರೀ ಮಲೆ ಮಹದೇಶ್ವರಸ್ವಾಮಿಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ. ಕಾತ್ಯಾಯಿನಿ ದೇವಿ, ಅರಣ್ಯ ಇಲಾಖೆಯ ಡಿಸಿಎಫ್ ವಿ.ಏಡುಕೊಂಡಲು, ನಂದೀಶ್, ಮುಖಂಡರಾದ ಪೆÇನ್ನಾಚಿ ಮಹದೇವಸ್ವಾಮಿ, ದತ್ತೇಶ್ ಕುಮಾರ್, ಹರಗುರು ಚರಮೂರ್ತಿಗಳು ಇದ್ದರು.