ಮ.ಮ ಬೆಟ್ಟದಲ್ಲಿ ಹುಂಡಿ ಏಣಿಕೆ ಕಾರ್ಯ

ಸಂಜೆವಾಣಿ ವಾರ್ತೆ
ಹನೂರು ಜು.28:- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಹುಂಡಿಗಳ ಎಣಿಕೆ ಕಾರ್ಯವನ್ನು ಮಾಡಲಾಗಿದ್ದು ಸುಮಾರು 1.ಕೋಟಿ. 56.ಲಕ್ಷ ರೂ. ನಗದು ಹಣ ಸಂಗ್ರಹವಾಗಿದೆ.
ಗುರುವಾರ ಮಲೆ ಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಸಿ.ಸಿ ಟಿವಿ ಕಣ್ಗಾವಲಿನಲ್ಲಿ ಹಾಗೂ ಪೆÇಲೀಸ್ ಬಂದೋಬಸ್ತ್ ನಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ಶ್ರೀ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಹುಂಡೇದ ಅವರ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಕಾರ್ಯವು ನಡೆಯಿತು.
ಶ್ರೀ ಮಲೆ ಮಾದಪ್ಪನ ಸನ್ನಿಧಿಯಲ್ಲಿನ ಕಾಣಿಕೆ ಹುಂಡಿಯಲ್ಲಿ ಸುಮಾರು 1 ಕೋಟಿ. 56 ಲಕ್ಷ. 38 ಸಾವಿರ. 122 ರೂ. ಹಾಗೂ ಚಿನ್ನ 30 ಗ್ರಾಂ, ಬೆಳ್ಳಿ 1 ಕೆಜಿ. 26 ಗ್ರಾಂ ಸಂಗ್ರಹವಾಗಿದೆ.
ದಿನಾಂಕ : 07 /07 /2023 ರಿಂದ 26 /07 /2023 ರವರೆಗಿನ 21 ದಿನಗಳಲ್ಲಿ ಭಕ್ತರು ಮಹದೇಶ್ವರ ಸ್ವಾಮಿಗೆ ನೀಡಿರುವ ಹರಕೆ ಕಾಣಿಕೆಯು ಇದಾಗಿದೆ.
ಅಮಾವಾಸ್ಯೆ ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಸಿಬ್ಬಂದಿಗಳು ಪ್ರಾಧಿಕಾರದ ನೌಕರರು ಸಿಬ್ಬಂದಿಗಳು ಪೆÇಲೀಸರು ಹಾಜರಿದ್ದರು.