ಮ.ಬೆಟ್ಟದ ಹುಂಡಿಯಲ್ಲಿ 2,21,32,439 ರೂ. ಸಂಗ್ರಹ

ಹನೂರು, ನ.13: ತಾಲ್ಲೂಕಿನ ಸುಪ್ರಸಿದ್ಧ ದೇವಾಲಯ ಮ.ಮ.ಬೆಟ್ಟ ಮಾದಪ್ಪನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಕಳೆದ 54 ದಿನಗಳ ಬಳಿಕೆ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ನಾಣ್ಯಗಳನ್ನು ಒಳಗೊಂಡಂತೆ 2,21,32,439 ರೂ.ಗಳು ಹಾಗೂ 40 ಗ್ರಾಂ.ಚಿನ್ನ, 1.657 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ.
ಕರೋನಾ ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಅಮಾವಾಸ್ಯೆ, ಹುಣ್ಣಿಮೆ, ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಭಕ್ತಾಧಿಗಳ ಬರುವಿಕೆಯನ್ನು ನಿರ್ಭಂಧಿಸಲಾಗಿದ್ದರೂ 54 ದಿನಗಳಲ್ಲಿ ಇಷ್ಟೊಂದು ಮೊತ್ತದ ಹಣ ಸಂಗ್ರಹವಾಗಿರುವುದು ಮಾದಪ್ಪನ ಭಕ್ತರ ಭಕ್ತಿಯ ಪರಾಕಾಷ್ಠೆ ಎನ್ನಲಾಗಿದೆ.