ಮ.ಬೆಟ್ಟದಲ್ಲಿ ಚಿನ್ನದ ರಥೋತ್ಸವದ ಶುಲ್ಕ ಹೆಚ್ಚಳದ ಹಿನ್ನೆಲೆ : ಭಕ್ತರ ಅಸಾಮಾಧಾನ

ಹನೂರು, ಡಿ.27: ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥೋತ್ಸವದ ಶುಲ್ಕ ಹೆಚ್ಚಳದ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿರುವ ದುಡ್ಡಿರುವವರಿಗೆ ಮಾದಪ್ಪ ಇಲ್ಲದಿರುವವರಿಗೆ ನೋವೇ ಗತಿಯಪ್ಪ, ಎಂಬ ನಾನ್ನುಡಿ ಗಾದೆಯ ಮಾತು ಮಹದೇಶ್ವರಸ್ವಾಮಿಯ ಭಕ್ತರ ಅಸಾಮಾಧಾನಕ್ಕೆ ಕಾರಣವಾಗಿದೆ.
ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟವು ರಾಜ್ಯ ಸೇರಿದಂತೆ ಅಂತರಾಜ್ಯದಲ್ಲೂ ಹೆಸರುವಾಸಿಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಆಧಾಯ ತಂದುಕೊಡುವ ದೇವಾಲಯಗಳಲ್ಲಿ ಮಹದೇಶ್ವರ ಬೆಟ್ಟವು ಒಂದು. ಈಗಿದ್ದಿರು ಸಹ ಕೋಟ್ಯಂತರ ರೂ ಆದಾಯ ಬರುವ ದೇವಾಲಯದಲ್ಲಿ ಕೆಲವು ಬದಲಾವಣೆ ತರುತ್ತಿರುವ ಪ್ರಾಧಿಕಾರದವರ ನಡೆಗೆ ಭಕ್ತರು ಅಸಾಮಾಧಾನ ವ್ಯಕ್ತಪಡಿಸಿ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದವರು ವಿವಿಧ ಸೇವಾ ಶುಲ್ಕ ಹೆಚ್ಚಳ ಮಾಡಿರಿವುದರಿಂದ ಬಡಭಕ್ತರ ಮೇಲೆ ಬರ ಎಳೆದಂತಾಗಿದೆ ಪ್ರಧಿಕಾರದ ತಿಮಾ9ನ ಮಹಾದೇಶ್ವರ ದೇವರು ಕೇವಲ ಶ್ರೀಮಂತರಿಗೆ ಹೊರತು ಮಧ್ಯಮ ವರ್ಗದ ಭಕ್ತರಿಗೆ ಇಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಲಾಡು ಪ್ರಸಾದ ದರ ಏರಿಕೆ : ಮಹದೇಶ್ವರ ಬೆಟ್ಟದ ಮಾದಪ್ಪನ ದೇವಾಲಯದಲ್ಲಿ ಇಟ್ಟಿಸಿಗಷ್ಟೇ ಲಾಡು ಪ್ರಸಾದ ದರವನ್ನು ಪ್ರಾಧಿಕಾರದವರು ಹೆಚ್ಚಳ ಮಾಡಿದ್ದರು. ಕೊರೊನಾ ಸಂಕಷ್ಟದಿಂದ ಇನ್ನು ಸಹ ಜನರು ಆರ್ಥಿಕವಾಗಿ ಚೇತರಿಕೆ ಕಂಡಿಕಂಡಿಲ್ಲ, ಕೊರೊನಾದಿಂದ ಹಲವರಿಗೆ ಕೆಲಸ ವಿಲ್ಲದೆ, ಅದಾಯವಿಲ್ಲದೆ ಪರಿತಪಿಸಿದ್ದಾರೆ. ಇವೆಲ್ಲ ಕಷ್ಟ ನೋವುಗಳನ್ನು ಪರಿಹರಿಸು ಮಾದೇವ ಎಂದು ವಿವಿಧ ಹರಕೆ ಹೊತ್ತ ಭಕ್ತರು ಬೇಡುತ್ತ ಸನ್ನಿದಿಗೆ ಬರುತ್ತಾರೆ . ಆದರೆ ದೇವಾಲಯದಲ್ಲಿ ವಿವಿಧ ಸೇವಾ ಶುಲ್ಕ ಹೆಚ್ಚಳವಾಗಿರುವುದಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿ ಚರ್ಚೆಗೆ ಗ್ರಾಸವಾಗಿದೆ.
ದೇವರ ಹೆಸರಲ್ಲಿ ಶುಲ್ಕ ಹೆಚ್ಚಳ ಮಾಡಿರುವುದು ಬಡ ಭಕ್ತರ ಮೇಲೆ ಬರ ಎಳೆದ ಸ್ಥಿತಿಯನ್ನು ಪ್ರಾಧಿಕಾರದವರು ನಿರ್ಮಾಣ ಮಾಡಿದ್ದಾರೆ ಎಂದು ಭಕ್ತರು ಹಾಗೂ ಸಾರ್ವಜನಿಕರು ಪ್ರಾಧಿಕಾರದ ನಡೆಯನ್ನು ಒಪ್ಪುತ್ತಿಲ್ಲ.
ಚಿನ್ನದ ತೇರಿನ ಸೇವಾ ದರ ಹೆಚ್ಚಳ : ಈಗಾಗಲೆ ಚಿನ್ನದ ತೇರಿಗೆ ನಿಗದಿಪಡಿಸಿದ್ದ 2501 ರೂಪಾಯಿಗಳನ್ನು ಹರಕೆ ಹೊತ್ತಿದ್ದ ಭಕ್ತರು ಕಷ್ಟಪಟ್ಟು ಪಾವತಿ ಮಾಡಿ ಹರಕೆ ತೀರಿಸುತ್ತಿದ್ದರು.
ಶುಕ್ರವಾರದಿಂದ ಪರಿಷ್ಕೃತ ಧರ 500 ಹೆಚ್ಚಳವಾಗಿರುವುದಕ್ಕೆ ಅಂದರೆ 3001 ರೂ ಆಗಿರುವ ಹಿನ್ನಲೆ ಪ್ರಾಧಿಕಾರದ ವಿರುದ್ದ ಭಕ್ತರು ಹಾಗೂ ಸಾರ್ವಜನಿಕರು ಅಸಮದಾನವ ವ್ಯಕ್ತಪಡಿಸಿ,ದುಡ್ಡಿರುವವರಿಗೆ ಮಾದಪ್ಪ ಇಲ್ಲದಿರುವವರಿಗೆ ನೋವೇ ಗತಿಯಪ್ಪ. ಚಿನ್ನದ ತೇರು ಶ್ರೀಮಂತರ ಪಾಲಾಗುತ್ತಿದೆ ಎಂದು ಆರೋಪವನ್ನು ಸಹ ಮಾಡುತ್ತಿದ್ದಾರೆ.
ವಿವಿಧ ಸೇವಾ ಶುಲ್ಕ ಹೆಚ್ಚಳ : ಇತ್ತೀಚೆಗೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು. ಇದೇ ವೇಳೆ ವಿವಿಧ ಸೇವಾ ಶುಲ್ಕ ದರ ಏರಿಕೆ ಮಾಡುವ ಪ್ರಸ್ತಾವನೆಗೂ ಸಹ ಪ್ರಾಧಿಕಾರದ ಸಭೆ ಅನುಮೋದನೆ ನೀಡಿತ್ತು.
ಈ ಹಿಂದೆ 2015 ರ ಜುಲೈ ನಲ್ಲಿ ಚಿನ್ನದ ತೇರಿನ ಸೇವಾ ಶುಲ್ಕವನ್ಮು ಪರಿಷ್ಕರಿಸಲಾಗಿತ್ತು. ಇದೀಗ 5 ವರ್ಷ 5 ತಿಂಗಳರಾಗಿರುತ್ತದೆ.
ವಿವಿಧ ಸೇವಾ ಮತ್ತು ಉತ್ಪನ್ನಗಳನ್ನು ನಿರ್ವಹಿಸಲು ವೇತನ, ಪ್ರಸಾದ ಕಚ್ಚ ಪದಾರ್ಥಗಳು ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ವಿವಿಧ ಸೇವಾ ಶುಲ್ಕವನ್ನು ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರದವರು ಆದೇಶದಲ್ಲಿ ತಿಳಿಸಿದ್ದಾರೆ.
ಭಕ್ತರು ತಮ್ಮಗಳ ಕಷ್ಟ ಕಾರ್ಪಣ್ಯ ಹಾಗೂ ಇನ್ನಿತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ತೇರಿನ ಉತ್ಸವ ಮಾಡಿಸುವುದಾಗಿ ರಕೆ ಹರಕೆಹೊರುತ್ತಾರೆ. ಮತ್ತೆ ಕೆಲವರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪದ ಉತ್ಸವಹಾಗೂ ಇನ್ನಿತರ ಸೇವೆಗಳನ್ನು ಮಾಡಿಸುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಭಕ್ತರು ನಿಗಧಿತ ಸೇವಾ ಶುಲ್ಕ ನೀಡಿ ಚಿನ್ನದ ತೇರು, ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವ
ಹಾಗೂ ಇನ್ನಿತರ ಸೇವಾ ಕಾರ್ಯಗಳನ್ನು ಮಾಡಿಸುವ ಮೂಲಕ ಹರಕೆ ತೀರಿಸುತ್ತಾರೆ.ಆದರೆ ಇದೀಗ ಸೇವಾ ಶುಲ್ಕ ಹೆಚ್ಚಳ ಮಾಡಿರುವುದು ಭಕ್ತರ ಅಸಾಮಾಧಾನಕ್ಕೆ ಕಾರಣವಾಗಿದೆ.