
ಕೋಲಾರ,ಅ.೨೭:ಇಯಂತ್ರ, ಐಐಟಿ ಬಾಂಬೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ವರ್ಚುವಲ್ ಮ್ಯೂಸಿಯಂ ಸ್ಪರ್ಧೆಯಲ್ಲಿ ಭಾಗವಹಿಸಿ ನಗರದ ಸಾಯಿ ಅನೀಶ್ ವಿ.ಎಂ ೩ನೇ ಬಹುಮಾನ ಪಡೆದಿದ್ದಾರೆ.
ಕಲಾಕೃತಿ ಹಂಪಿಯ ಕಲ್ಲಿನ ರಥ. ವರ್ಚುವಲ್ ಮ್ಯೂಸಿಯಂ ರಚಿಸಲು ಅವರು ವಿವಿಧ ಅಪ್ಲಿಕೇಶನ್‌ಗಳನ್ನು ಬಳಸಿದರು. ಪ್ರಪಂಚದಾದ್ಯಂತ ಸುಮಾರು ೧೦೦೦ ವಿದ್ಯಾರ್ಥಿಗಳು ಮತ್ತು ೫೭ ಶಾಲೆಗಳು ಮ್ಯೂಸಿಯಂ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
೧ ಮತ್ತು ೨ ನೇ ಬಹುಮಾನವನ್ನು ಭೂತಾನ್ ಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಂಡರು. ಸಾಯಿ ಅನೀಶ್ ವಿ.ಎಂ ಕೋಲಾರದ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ೮ನೇ ತರಗತಿ ಓದುತ್ತಿದ್ದಾನೆ. ಸಾಯಿ ಅನೀಶ್ ವಿ.ಎಂ ಕೋಲಾರದ ಜಯನಗರ ೩ನೇ ಕ್ರಾಸ್‌ನಲ್ಲಿ ವಾಸವಾಗಿರುವ ಶ್ರೀಮತಿ ದಿವ್ಯಾ ಮತ್ತು ಶ್ರೀ ಮಹೇಶ್ ದಂಪತಿಗಳ ಸುಪುತ್ರರಾಗಿದ್ದಾರೆ.