ಮ್ಯಾರಥಾನ್ ಕ್ರೀಡಾಪ್ರತಿಭೆ ಶರಣಬಸವ

ಕಲಬುರಗಿ,ಜ 8: ಶರಣಬಸವ ಗ್ಯಾಂಗಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದವರು.23 ರ ಹರೆಯದ ಶರಣಬಸವ ಸದ್ಯ ದೊಡ್ಡ ಬಳ್ಳಾಪೂರ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾರೆ. ಕಳೆದ ವರ್ಷ ಪಿ.ಯು ಕ್ರೀಡಾಕೂಟದ ಹಾಪ್ ಮ್ಯಾರಾಥಾನನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಪರಿಣಾಮ ರಾಜ್ಯ ಸರಕಾರದ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾದರು.ಶಾಲಾದಿನಗಳಲ್ಲಿ ಕಿತ್ತು ತಿನ್ನುವ ಬಡತನದಿಂದ ಸ್ನೇಹಿತರು ನೀಡುವ ಚಾಕಲೇಟ್‍ಗಾಗಿ ಆರಂಭಿಸಿದ ವೇಗದ ಓಟ ಇಂದು ಅವರನ್ನು ರಾಷ್ಟ್ರೀಯ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಈಗ ಶರಣಬಸವ ಹಾಪ್ ಮ್ಯಾರಾಥಾನ್ ಕ್ರೀಡಾಕೂಟದಲ್ಲಿ ದೇಶಕ್ಕೆ ಒಂಬತ್ತನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಅನನ್ಯ ಸಾಧನೆ ಮಾಡಿರುವ ಈ ಕ್ರೀಡಾ ಪಟುವಿಗೆ ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಲಿವೆ.
ಕಡು ಬಡತನದಲ್ಲಿ ಇದ್ದ ಶರಣಬಸವನ ಪ್ರತಿಭೆಯನ್ನು ಗುರುತಿಸಿದ್ದು ವನವಾಸಿ ಕಲ್ಯಾಣ ಸಂಸ್ಥೆ. ಈ ಸಂಸ್ಥೆ ಆಯೋಜಿಸಿದ ಎಲ್ಲಾ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಇವರೇ ಮೊದಲಿಗರು. ಕಳೆದ ಡಿಸೆಂಬರಲ್ಲಿ ನಿವೃತ್ತ ಪೆÇೀಲಿಸ್ ಅಧಿಕಾರಿ ಕಿರಣ ಬೇಡಿ ಆಯೋಜಿಸಿದ್ದ ಬೆಂಗಳೂರು ಮಿಡ್ ನೈಟ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ನೇಪಾಳ ದೇಶದಲ್ಲಿ ನಡೆಸಿದ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಇವರು ಮೊದಲಿಗರಾಗಿದ್ದಾರೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಶರಣಬಸವ ಚೆನ್ನೈನಲ್ಲಿ ನಾಳೆ(ಜನೆವರಿ 9)ಯಿಂದ ನಡೆಯುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು ತಾಲೀಮು ನಡೆಸುತ್ತಿದ್ದಾರೆ.
ಹಾಪ ಮ್ಯಾರಾಥಾನ 21 ಕಿ.ಮೀ. ಓಡುವ ಕ್ರೀಡೆಯಾಗಿದೆ ಈ ಕ್ರಮವನ್ನು 1 ಗಂಟೆ15 ನಿಮಿಷದಲ್ಲಿ ಓಡಿದ ದಾಖಲೆ ಇದೆ. ರಾಷ್ಟ್ರೀಯ ದಾಖಲೆಗೆ ಎಂಟು ನಿಮಿಷ ವ್ಯತ್ಯಾಸವಿದೆ. ಇದನ್ನು ಮೀರಿಸುವ ಹುಮ್ಮಸ್ಸು ಇವರಲ್ಲಿದೆ.
ವನವಾಸಿ ಕಲ್ಯಾಣ ಸಂಸ್ಥೆ ಪ್ರಭು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ ಶಹಾಪುರಕರ, ಅಂಬೇಡ್ಕರ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭೀಮಣ್ಣ ಅರಹಳ್ಳಿಯವರು ತರಬೇತಿ ನೀಡಿದ್ದಾರೆ. ಬಡತನದಲ್ಲಿ ಅರಳುತ್ತಲಿರುವ ಈ ಕ್ರೀಡಾಪಟುವಿಗೆ ಪೆÇ್ರೀತ್ಸಾಹ ಮತ್ತು ಆರ್ಥಿಕ ನೆರವು ಬೇಕಾಗಿದೆ. ದೇಶದ ಅಥ್ಲಿಟಿಕ್ ಕೋಚ್ ಆಗಬೇಕು ವಾಯು ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಅದಮ್ಯಗುರಿ ಶರಣಬಸವ ಹೊಂದಿದ್ದಾರೆ.
-ಗುರುರಾಜ.ಕೆ.ಪಟ್ಟಣಶೆಟ್ಟಿ